Pages

ನಂದ ತನಯ ಗೋವಿಂದನ ಭಜಿಪುದು

Tuesday, 7 July 2009

ಸಾಹಿತ್ಯ-ಪುರಂದರದಾಸ


ನಂದ ತನಯ ಗೋವಿಂದನ ಭಜಿಪುದು ಆನಂದವಾದ ಮಿಠಾಯಿ ।
ಬಂಧನಗಳನು ಭವರೋಗಗಳನು, ನಿಂದಿಪುದು ಈ ಮಿಠಾಯಿ ॥

ದಧಿಘೃತಕ್ಷೀರಂಗಳಿಗಿಂತಲೂ ಬಹು ಅಧಿಕವಾದ ಮಿಠಾಯಿ ।
ಕದಳೀದ್ರಾಕ್ಷಿಖರ್ಜೂರರಸಗಳನು ಮೀರುವುದು ಈ ಮಿಠಾಯಿ ॥೧॥

ಪಂಚಭಕ್ಷ್ಯಷಡ್ರಾಸಾನ್ನಗಳನು ಮಿಂಚಿವುದು ಈ ಮಿಠಾಯಿ ।
ಕಂಚೀಶನೇ ರಕ್ಷಿಸು ಎಂದುಸುರುವ, ಅಂಜಿಕೆ ಬಿಡಿಪೋ ಮಿಠಾಯಿ ॥೨॥

ಜಪತಪಸಾಧನಂಗಳಿಂತಲೂ ಬಹು ಅಪುರೂಪದ ಮಿಠಾಯಿ ।
ಜಿಪುಣಮತಿಗಳಿಗೆ ಸಾಧ್ಯವಲ್ಲದಿಹ ಪುರಂದರವಿಠಲ ಮಿಠಾಯಿ ॥೩॥

0 comments:

Popular Posts