Pages

Showing posts with label ಜಾನಪದ ಗೀತೆ. Show all posts
Showing posts with label ಜಾನಪದ ಗೀತೆ. Show all posts

ಘಲ್ಲು ಘಲ್ಲೆನುತ

Monday, 31 August 2015


ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ದಾದೆನುತ ।
ಬಲ್ಲಿದ ರಂಗನ್‌ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೋ ॥

ಅರೆದರು ಅರಿಶಿಣವ ಅದಕೆ ಬೆರಸ್ಯಾರೆ ಸುಣ್ಣವ ।
ಅಂದವುಳ್ಳ ರಂಗನ್‌ ಮೇಲೆ ಚೆಲ್ಲಿದರೋಕುಳಿಯೋ ॥೧॥

ಹಾಲಿನೋಕುಳಿಯೋ ಒಳ್ಳೆ ನೀಲದೋಕುಳಿಯೋ ।
ಲೋಲನಾದ ರಂಗನ್‌ ಮ್ಯಾಲೆ ಹಾಲಿನೋಕುಳಿಯೊ ॥೨॥

ತುಪ್ಪದೋಕುಳಿಯೋ ಒಳ್ಳೆ ಒಪ್ಪದೋಕುಳಿಯೋ ।
ಒಪ್ಪವುಳ್ಳ ರಂಗನ್‌ ಮ್ಯಾಲೆ ತುಪ್ಪದೋಕುಳಿಯೋ ॥೩॥

Read more...

ಮುಂಜಾನೆದ್ದು ಕುಂಬಾರಣ್ಣ


ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡನ ಹಾರ್ಯಾಡಿ ಮಣ್ಣ ತುಳಿದಾನ ।
ಹಾರಿಹಾರ್ಯಾಡಿ ಮಣ್ಣ ತುಳಿಯುತ ಮಾಡ್ಯಾನ ನಾರ್ಯಾರು ಹೋರುವಂತ ಐರಾಣಿ ॥

ಹೊತ್ತಾರೆದ್ದು ಕುಂಬಾರಣ್ಣ ತುಪ್ಪಬಾನುಂಡನ ಘಟ್ಟೀಸಿ ಮಣ್ಣ ತುಳಿದಾನ ।
ಘಟ್ಟೀಸಿ ಮಣ್ಣ ತುಳಿಯುತ ಮಾಡ್ಯಾನ ಮಿತ್ರೇರು ಹೋರುವಂತ ಐರಾಣಿ ॥೧॥

ಅಕ್ಕಿಹಿಟ್ಟು ನಾನು ತಕ್ಕೊಂಡು ಬಂದೀವ್ನಿ ಗಿಂಡೀಲಿ ತಂದೀವ್ನಿ ತಿಳಿದುಪ್ಪ ।
ಗಿಂಡೀಲಿ ತಂದೀವ್ನಿ ತಿಳಿದುಪ್ಪ ಕುಂಬಾರಣ್ಣ ತಂದಿಡು ನಮ್ಮ ಐರಾಣಿ ॥೨॥

ಕುಂಬಾರಣ್ಣನ ಮಡದಿ ಕಡಗದ ಕೈಯಿಕ್ಕಿ ಕೊಡದ ಮ್ಯಾಲೇನ ಬರೆದಾಳ ।
ಕೊಡದ ಮ್ಯಾಲೇನ ಬರೆದಾಳ್ ಕಲ್ಯಾಣದ ಶರಣಬಸವನ ನಿಲಿಸ್ಯಾಳ ॥೩॥

Read more...

Popular Posts