ಕಾಗದ ಬಂದಿದೆ
Tuesday, 7 July 2009
ಸಾಹಿತ್ಯ-ಪುರಂದರದಾಸ
ಕಾಗದ ಬಂದಿದೆ ನಮ್ಮ ಈ ಕಾಗದವನ್ನು ಓದಿಕೊಂಡು ಕಾಲ ಕಳೆಯಿರೋ ॥
ಕಾಮಕ್ರೋಧವ ಬಿಡಿರೆಂಬೋ ಕಾಗದ ಬಂದಿದೆ ।
ನೇಮ ನಿಷ್ಠೆಯೋಳ್ ಇರಿರೆಂಬೋಕಾಗದ ಬಂದಿದೆ ।
ತಾಮಸ ಜನರ ಕೂಡದಿರೆಂಬೋಕಾಗದ ಬಂದಿದೆ ।
ನಮ್ಮ ಕಾಮನಯ್ಯನು ತಾನೆ ಬರೆದ ಕಾಗದ ಬಂದಿದೆ ॥೧॥
ಹೆಣ್ಣಿನಾಶೆಯ ಬಿಡಿರೆಂಬೋಕಾಗದ ಬಂದಿದೆ ।
ಹೊನ್ನಿನಾಶೆಯ ಬಿಡಿರೆಂಬೋಕಾಗದ ಬಂದಿದೆ ।
ಮಣ್ಣಿನಾಶೆಯ ಬಿಡಿರೆಂಬೋಕಾಗದ ಬಂದಿದೆ ।
ನಮ್ಮ ಕಮಲನಾಭನು ತಾನೇ ಕಾಗದ ಬಂದಿದೆ ॥೨॥
ಗೆಜ್ಜೆಕಾಲಿಗೆ ಕಟ್ಟಿರೆಂಬೋ ಕಾಗದ ಬಂದಿದೆ ।
ಹೆಜ್ಜೆ ಹೆಜ್ಜೆಗೆ ಹರಿ ಎನ್ನಿರೆಂಬೋಕಾಗದ ಬಂದಿದೆ ।
ಲಜ್ಜೆಯ ಬಿಟ್ಟು ಕುಣಿಯಿರಿ ಎಂಬೋಕಾಗದ ಬಂದಿದೆ ।
ನಮ್ಮ ಪುರಂದರವಿಠಲ ತಾನೇ ಬರೆದ ಕಾಗದ ಬಂದಿದೆ ॥೩॥
0 comments:
Post a Comment