ಕೇಶವ ಮಾಧವ
Tuesday, 7 July 2009
ಸಾಹಿತ್ಯ-ಪುರಂದರದಾಸ
ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣಿರೆ
ದೋಷರಹಿತ ನರವೇಷ ಧರಿಸಿದ ದಾಸಯ್ಯ ಬಂದ ಕಾಣಿರೇ॥
ಖಳನು ವೇದವನೊಯ್ಯೆ ಪೊಳೆವಕಾಯನಾದ
ಘಳಿಲಾನೆ ಕೂರ್ಮ ತಾನಾಗಿ ಗಿರಿಯ ಪೊತ್ತ
ಇಳೆಯ ಕದ್ದಸುರನ ಕೋರೆದಾಡೀಲಿ ಕೊಂದ
ಛಲದಿ ಕಂಬದಿ ಬಂದು ಅಸುರನ ಕೊಂದ ॥೧॥
ಲಲನೆಯನೊಯ್ಯೆ ತಾ ತಲೆಹತ್ತರನ ಕೊಂದ
ನೆಲಕೊತ್ತಿ ಕಂಸನ ಬಲವ ಸಂಹರಿಸಿದ
ಪುಂಡತನದಿ ಪೋಗಿ ಪುರವಾನುರಪಿ ಬಂದ
ಭಂಡರ ಸದೆಯಲು ತುರುಗವನೇರಿದ ॥೨॥
ಹಿಂಡು ವೇದಗಳೆಲ್ಲ ಅರಸಿ ನೋಡಲು ಸಿಗದೆ
ದಾಸಯ್ಯ ಬಂದ ಕಾಣಿರೇ
ಪಾಂಡುರಂಗ ನಮ್ಮ ಪುರಂದರವಿಠಲ
ದಾಸಯ್ಯ ಬಂದ ಕಾಣಿರೇ ॥೩॥
0 comments:
Post a Comment