Pages

ಶರಣು ಸಕಲೋಧ್ಧಾರ

Tuesday, 7 July 2009

ಸಾಹಿತ್ಯ-ಪುರಂದರದಾಸ


ಶರಣು ಸಕಲೋಧ್ಧಾರ ಅಸುರ ಕುಲ ಸಂಹಾರ ।
ಅರಸು ದಶರಥ ಬಾಲ ಜಾನಕೀಲೋಲ ॥

ಈ ಮುದ್ದು ಈ ಮುಖವು ಈ ತನುವಿನ ಕಾಂತಿ ।
ಈ ಬಿಲ್ಲು ಈ ಬಾಣ ಈ ನೀತಿ ಭಾವ ।
ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ ।
ಆವ ದೇವರಿಗುಂಟು ಮೂರ್ಲೋಕದೊಳಗೆ ॥೧॥

ಉಟ್ಟ ಪೀತಾಂಬರವು ಉಡಿಗೆಜ್ಜೆ ಮಾಣಿಕ್ಯವು ।
ತೊಟ್ಟ ನವರತ್ನ ಸರ ಕೌಸ್ತುಭಹಾರ ।
ಕೊಟ್ಟ ನಂಬಿಕೆ ತಪ್ಪ ತನ್ನ ಭಕ್ತರಿಗೆಲ್ಲ ।
ಸೃಷ್ಟಿಯೊಳಗೆಣೆಗಾಣೆ ಕೌಸಲ್ಯರಾಮ ॥೨॥

ಭಾವಿಸಲು ಆಯೋಧ್ಯ ಪಟ್ಟಣದಲಿ ವಾಸ ।
ಬೇಡಿದಿಷ್ಟಾರ್ಥಗಳ ಕೊಡುವೆನೆನುತ ।
ಭಾವಶುಧ್ಧದಿ ಭಜಿಪ ತನ್ನ ಭಕ್ತರ ಪೊರೆವ ।
ಪುರಂದರವಿಠಲನೆ ರಘುರಾಮ ನಿಸ್ಸೀಮ ॥೩॥

0 comments:

Popular Posts