ಚಿಂತ್ಯಾಕ ಮಾಡುತ್ತಿದ್ದಿ ಚಿನ್ಮಯನಿದ್ದಾನೆ
Tuesday, 7 July 2009
ಸಾಹಿತ್ಯ-ಪುರಂದರದಾಸ
ಚಿಂತ್ಯಾಕ ಮಾಡುತ್ತಿದ್ದಿ ಚಿನ್ಮಯನಿದ್ದಾನೆ ।
ಚಿಂತಾರತ್ನನೆಂಬೋ ಅನಂತನಿದ್ದಾನೆ ಪ್ರಾಣಿ ಅನಂತನಿದ್ದಾನೆ,ಅನಂತನಿದ್ದಾನೆ ॥
ಎಳ್ಳು ಮೊನೆಯ ಮುಳ್ಳು ಕೊನೆಯ ಪೊಳ್ಳು ಬಿಡದೇ ಒಳಗೆ ಹೊರಗೆ
ಎಲ್ಲಾ ಠಾವಿನಲ್ಲಿ ಲಕ್ಷ್ಮೀವಲ್ಲಭನಿದ್ದಾನೆ ।
ಗೋಪ್ತ ತ್ರಿಜಗ ವ್ಯಾಪ್ತ ಭಜಕರ ಆಪ್ತನೆನಿಸಿ ಸ್ಥಂಭದಲ್ಲಿ
ಪ್ರಾಪ್ತನಾದ ಪ್ರಹ್ಲಾದನ ಪರಮಾಪ್ತನಿದ್ದಾನೆ,
ಪ್ರಾಣಿ ಆಪ್ತನಿದ್ದಾನೆ, ಪರಮಾಪ್ತನಿದ್ದಾನೆ ॥೧॥
ಹಿಂದೆ ನಿನ್ನ ಸಲಹಿದರ್ಯಾರೋ ಮುಂದೆ ನಿನ್ನ ಕೊಲ್ಲುವರ್ಯಾರೋ
ಅಂದಿಗಿಂದಿಗೆಂದಿಗೂ ಗೋವಿಂದನಿದ್ದಾನೆ ।
ಅಂದಿಗೆ ಇದ್ದ ಈಶ ಇಂದಿಗೂ ಇದ್ದಾನೆ, ಅಂದಿಗೆ ಇಂದಿಗೆ ಇಂದಿಗೆ ಅಂದಿಗೆ ಎಂದಿಗೂ ಇದ್ದಾನೆ
ಪ್ರಾಣಿ ಎಂದಿಗೂ ಇದ್ದಾನೆ, ಎಂದೆಂದಿಗೂ ಇದ್ದಾನೆ ॥೨॥
ಮುಕ್ಕಣ್ಣ ದೇವರ್ಕಳಿಗೆ ಸಿಕ್ಕಿದ್ದ ಸೆರೆಯನ್ನು ಬಿಡಿಸಿ
ಚಿಕ್ಕವರಿಗೆ ಅಚಲ ಪದವಿಯ ದಕ್ಕಿಸಿದ್ದಾನೆ ।
ನಾನು ನನ್ನದು ಎಂಬುದು ಬಿಟ್ಟು ಹೀನ ವಿಷಯಂಗಳನು ಜರಿದು
ಙ್ಞಾನಗಮ್ಯ ಕಾಯೋ ಎನಲು ಪೂರ್ಣನಿದ್ದಾನೆ
ಪ್ರಾಣಿ ಪೂರ್ಣನಿದ್ದಾನೆ, ಪರಿಪೂರ್ಣನಿದ್ದಾನೆ ॥೩॥
ಸುತ್ತಲಿ ಬಂದ ದುರಿತಗಳೆಲ್ಲ ಕತ್ತರಿಸಿ ಕಡಿದು ಹಾಕುವ
ಹೆತ್ತತಾಯಿತಂದೆ ತವರು ಹತ್ತಿರವಿದ್ದಾನೆ ।
ಬಲ್ಲಿದ ಭಜಕರ ಹೃದಯದಲ್ಲಿ ನಿಂತು ಪುರಂದರವಿಠಲ,
ಸೊಲ್ಲುಸೊಲ್ಲಿಗವರ ಬಯಕೆ ಸಲ್ಲಿಸುತಿದ್ದಾನೆ,
ಪ್ರಾಣಿ ಸಲ್ಲಿಸುತಿದ್ದಾನೆ, ಸಲ್ಲಿಸುತಿದ್ದಾನೆ ॥೪॥
0 comments:
Post a Comment