Pages

ಹರಿಚಿತ್ತ ಸತ್ಯ

Thursday 1 September 2011

ಸಾಹಿತ್ಯ-ಪುರಂದರದಾಸ


ಹರಿಚಿತ್ತ ಸತ್ಯ ನಮ್ಮ ಹರಿಚಿತ್ತ ಸತ್ಯ ।
ನರಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು॥

ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತ ।
ಮದುವ್ಯಾಗದಿರುವದು ಹರಿಚಿತ್ತವು ।
ಕುದುರೆ ಅಂದಣ ಆನೆ ಬಯಸೋದು ನರಚಿತ್ತ ।
ಪಾದಚಾರಿಯಾಗೋದು ಹರಿಚಿತ್ತವಯ್ಯ ॥೧॥

ವಿಧವಿಧ ಯಾತ್ರೆಯ ಬಯಸೋದು ನರಚಿತ್ತ ।
ಒದಗಿ ಬರುವ ರೋಗ ಹರಿಚಿತ್ತವು ।
ಸದಾ ಅನ್ನದಾನವ  ಬಯಸೋದು ನರಚಿತ್ತ।
ಉದರಕ್ಕೆ ಅಳುವುದು ಹರಿಚಿತ್ತವಯ್ಯ ॥೨॥

ಧರಣಿಯನಾಳಬೇಕೆಂಬುದು ನರಚಿತ್ತ ।
ಪರರ ಸೇವಿಸುವುದು ಹರಿಚಿತ್ತವು ।
ಪುರಂದರವಿಠಲನ ಬಯಸೋದು ನರಚಿತ್ತ ।
ದುರಿತವ ಕಳೆವುದೆ ಹರಿಚಿತ್ತವಯ್ಯ॥೩॥

0 comments:

Popular Posts