Pages

ಕಾಡು ಕುದುರೀ

Tuesday, 20 September 2011

ಸಾಹಿತ್ಯ-ಚಂದ್ರಶೇಖರ ಕಂಬಾರ
ಸಂಗೀತ - ಚಂದ್ರಶೇಖರ ಕಂಬಾರ
ಗಾಯನ - ಶಿವಮೊಗ್ಗ ಸುಬ್ಬಣ್ಣ, ಕಲ್ಪನಾ ಶಿರೂರ
ಚಿತ್ರ-ಕಾಡುಕುದುರೆ


ಕಾಡು ಕುದುರೀ ಓಡಿ ಬಂದಿತ್ತऽ ॥

ಊರಿನಾಚೆ ದೂರದಾರಿ ಸುರುವಾಗऽ ಜಾಗದಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ ಹಸಿರಿನ ಗುಟ್ಟऽ ಒಡೆವಲ್ಲಿ
ಮುಗಿವೇ ಇಲ್ಲದ ಮುಗಿಲಿನಿಂದ ಜಾರಿಬಿದ್ದ ಉಲ್ಕೀ ಹಾಂಗ ಕಾಡಿನಿಂದ ಚಂಗನೆ ನೆಗೆದಿತ್ತऽ ॥೧॥

ಮೈಯ್ಯ ಬೆಂಕಿ ಮಿರುಗತಿತ್ತऽ ಬ್ಯಾಸ್ಗಿ ಬಿಸಿಲऽ ಉಸಿರಾಡಿತ್ತऽ
ಹೊತ್ತಿ ಉರಿಯೊ ಕೇಶರಾಶಿ ಕತ್ತಿನಾಗ ಕುಣೀತಿತ್ತऽ
ಧೂಮಕೇತು ಹಿಂಬಾಲಿತ್ತऽ ಹೌಹಾರಿತ್ತऽ ಹರಿದಾಡಿತ್ತऽ ಹೈಹೈ ಅಂತ ಹಾರಿಬಂದಿತ್ತऽ ॥೨॥

ಕಣ್ಣಿನಾಗ ಸಣ್ಣ ಖಡ್ಗ ಆಸುಪಾಸು ಝಳಪಿಸಿತ್ತऽ
ಬೆನ್ನ ಹುರಿ ಬಿಗಿದಿತ್ತಣ್ಣ ಸೊಂಟದ ಬುಗುರಿ ತಿರಗತಿತ್ತऽ
ಬಿಗಿದ ಕಾಡಬಿಲ್ಲಿನಿಂದ ಬಿಟ್ಟ ಬಾಣದ್ಹಾಂಗ ಚಿಮ್ಮಿ ಹದ್ದऽ ಮೀರಿ ಹಾರಿ ಬಂದಿತ್ತऽ ॥೩॥

ನೆಲ ಒದ್ದು ಗುದ್ದऽ ತೋಡಿ ಗುದ್ದಿನ ಬದ್ದಿ ಒದ್ದಿಯಾಗಿ
ಒರತಿ ನೀರು ಭರ್ತಿಯಾಗಿ ಹರಿಯೋಹಾಂಗ ಹೆಜ್ಜೀ ಹಾಕಿ
ಹತ್ತಿದವರ ಎತ್ತಿಕೊಂಡು ಏಳಕೊಳ್ಳ ತಿಳ್ಳೆಳಾಡಿ ಕಳ್ಳೆಮಳ್ಳೆ ಆಡಿಸಿ ಕೆಡವಿತ್ತऽ ॥೪॥

0 comments:

Popular Posts