Pages

ಮಾಡಿ ಮಾಡಿ ಕೆಟ್ಟರೋ ಮನವಿಲ್ಲದೆ

Wednesday 31 August 2016

ಸಾಹಿತ್ಯ-ಬಸವಣ್ಣ


ಮಾಡಿ ಮಾಡಿ ಕೆಟ್ಟರೋ ಮನವಿಲ್ಲದೆ,
ನೀಡಿ ನೀಡಿ ಕೆಟ್ಟರೋ ನಿಜವಿಲ್ಲದೆ ॥

ಮಾಡಿದೆನೆಂಬುದು ಮನದಲಿ ಹೊಳೆದರೆ,
ನೀಡಿದೆನೆಂಬುದು ನಿಜದಲಿ ತಿಳಿದರೆ,
ಛೇಡಿಸಿ ಕಾಡಿತ್ತು ಶಿವನ ಡಂಗುರ ॥೧॥

ಮಾಡಿದೆನೆನ್ನದಿರಾಲಿಂಗಕೆ,
ನೀಡಿದೆನೆನ್ನದಿರಾಜಂಗಮಕೆ,
ಮಾಡುವ ನೀಡುವ ನಿಜಗುಣ ಉಳ್ಳೆಡೆ,
ಕೂಡಿಕೊಂಡಿರ್ಪ ಕೂಡಲಸಂಗಯ್ಯ | ॥೨॥


Read more...

ಚಕೋರಂಗೆ ಚಂದ್ರಮನ

ಸಾಹಿತ್ಯ-ಬಸವಣ್ಣ


ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕೆ ಭಾನುವಿನ ಉದಯದ ಚಿಂತೆ ॥೧॥

ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ,
ಎನಗೆ ನಮ್ಮ ಕೂಡಲಸಂಗಮದೇವನ ಚಿಂತೆ ॥೨॥

Read more...

Popular Posts