ಅಲ್ಲಿದೆ ನಮ್ಮನೆ
Wednesday, 31 August 2011
ಸಾಹಿತ್ಯ-ಪುರಂದರದಾಸ
ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ (/ಇಲ್ಲಿರುವುದು ಸುಮ್ಮನೆ),
ಅಲ್ಲಿದೆ ನಮ್ಮ ಮನೆ ॥
ಕದಬಾಗಿಲಿರಿಸಿಹ ಕಳ್ಳ ಮನೆ ಇದು
ಮುದದಿಂದ ಓಲ್ಯಾಡೊ ಸುಳ್ಳು ಮನೆ
ವೈಕುಂಠವೆಂಬುದೆ ನಮ್ಮ ಸ್ವಂತ ಮನೆ
ಇದ್ದು ಇಲ್ಲದೆ ಹೋಗೋ ಕನಸಿನ ಮನೆ ಇದು ॥೧॥
ಮಾಳಿಗೆಮನೆಯೆಂದು ನೆಚ್ಚಿ ಕೆಡಲು ಬೇಡ
ಕೇಳಯ್ಯ ಹರಿಕಥೆ ಶ್ರವಣಂಗಳ
ನಾಳೆ ಯಮದೂತರು ಬಂದೆಳೆದೊಯ್ಯುವಾಗ
ಮಾಳಿಗೆ ಮನೆ ಸಂಗಡ ಬಾರದಯ್ಯ ॥೨॥
ಮಡದಿಮಕ್ಕಳು ಎಂಬೋ ಹಂಬಲ ನಿನಗ್ಯಾಕೋ
ಕಡುಗೊಬ್ಬುತನದಲಿ ಕೊಬ್ಬಿನಡೆಯದಿರೋ
ಒಡೆಯ ಶ್ರೀಪುರಂದರವಿಠಲರಾಯನ
ಧೃಡಭಕ್ತಿಯಿಂದಲಿ ಭಜಿಸಿಕೋ ಮನುಜ ॥೩॥
ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ (/ಇಲ್ಲಿರುವುದು ಸುಮ್ಮನೆ),
ಅಲ್ಲಿದೆ ನಮ್ಮ ಮನೆ ॥
ಕದಬಾಗಿಲಿರಿಸಿಹ ಕಳ್ಳ ಮನೆ ಇದು
ಮುದದಿಂದ ಓಲ್ಯಾಡೊ ಸುಳ್ಳು ಮನೆ
ವೈಕುಂಠವೆಂಬುದೆ ನಮ್ಮ ಸ್ವಂತ ಮನೆ
ಇದ್ದು ಇಲ್ಲದೆ ಹೋಗೋ ಕನಸಿನ ಮನೆ ಇದು ॥೧॥
ಮಾಳಿಗೆಮನೆಯೆಂದು ನೆಚ್ಚಿ ಕೆಡಲು ಬೇಡ
ಕೇಳಯ್ಯ ಹರಿಕಥೆ ಶ್ರವಣಂಗಳ
ನಾಳೆ ಯಮದೂತರು ಬಂದೆಳೆದೊಯ್ಯುವಾಗ
ಮಾಳಿಗೆ ಮನೆ ಸಂಗಡ ಬಾರದಯ್ಯ ॥೨॥
ಮಡದಿಮಕ್ಕಳು ಎಂಬೋ ಹಂಬಲ ನಿನಗ್ಯಾಕೋ
ಕಡುಗೊಬ್ಬುತನದಲಿ ಕೊಬ್ಬಿನಡೆಯದಿರೋ
ಒಡೆಯ ಶ್ರೀಪುರಂದರವಿಠಲರಾಯನ
ಧೃಡಭಕ್ತಿಯಿಂದಲಿ ಭಜಿಸಿಕೋ ಮನುಜ ॥೩॥
0 comments:
Post a Comment