ಈ ಬಾನು ಈ ಚುಕ್ಕಿ
Thursday, 22 September 2011
ಸಾಹಿತ್ಯ-ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ
ಸಂಕಲನ - ಭಾವಸಂಗಮ
ಸಂಗೀತ - ಮೈಸೂರು ಅನಂತಸ್ವಾಮಿ
ಗಾಯನ - ಜಯಶ್ರೀ
ಈ ಬಾನು ಈ ಚುಕ್ಕಿ
ಈ ಹೂವು ಈ ಹಕ್ಕಿ ।
ತೇಲಿ ಸಾಗುವ ಮುಗಿಲು ಹರುಷವುಕ್ಕಿ
ಯಾರು ಇಟ್ಟರು ಇವನು ಹೀಗೆ ಇಲ್ಲಿ ?
ತುದಿ ಮೊದಲು ತಿಳಿಯದೀ ನೀಲಿಯಲಿ ॥
ಒಂದೊಂದು ಹೂವಿಗೂ ಒಂದೊಂದು ಬಣ್ಣ
ಒಂದೊಂದು ಜೀವಕೂ ಒಂದೊಂದು ಕಣ್ಣ
ಯಾವುದೊ ಬಗೆಯಲ್ಲಿ ಎಲ್ಲರಿಗೂ ಅನ್ನ
ಕೊಟ್ಟ ಕರುಣೆಯ ಮೂಲ ಮರೆತಿಹುದು ತನ್ನ ॥೧॥
ನೂರಾರು ನದಿ ಕುಡಿದು ಮೀರದ ಕಡಲು
ಬೋರೆಂದು ಸುರಿಸುರಿದು ಆರದ ಮುಗಿಲು
ಸೇರಿಯು ಕೋಟಿ ತಾರೆ ತುಂಬದ ಬಯಲು
ಯಾರದೀ ಮಾಯೆ ಯಾವ ಬಿಂಬದ ನೆರಳು ? ॥೨॥
ಹೊರಗಿರುವ ಪರಿಯೆಲ್ಲ ಅಡಗಿಹುದೇ ಒಳಗೆ ?
ಹುಡುಕಿದರೆ ಕೀಲಿ ಕೈ ಸಿಗದೆ ಎದೆ ಯೊಳಗೆ
ತಿಳಿಯದ್ದೆಲ್ಲದರಲ್ಲಿ ಕುಳಿತಿರುವೆ ನೀನೆ ಎನ್ನುವರು
ನನಗೀಗ ಸೋಜಿಗವು ನಾನೆ ! ॥೩॥
0 comments:
Post a Comment