Pages

ನೀನೆ ದಯಾಳೋ ನಿರ್ಮಲಚಿತ್ತ ಗೋವಿಂದ

Wednesday, 31 July 2013

ಸಾಹಿತ್ಯ-ಪುರಂದರದಾಸ


ನೀನೇ ದಯಾಳೋ ನಿರ್ಮಲಚಿತ್ತ ಗೋವಿಂದ ।
ನಿಗಮಗೋಚರ ಮುಕುಂದ ॥
ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು ।
ಮಾನದಿಂದಲಿ ಕಾವ ದೊರೆಗಳ ನಾ ಕಾಣೆ ॥

ದಾನವಾಂತಕ ದೀನಜನಮಂದಾರನೆ ।
ಧ್ಯಾನಿಪರ ಮನಸಂಚಾರನೆ ।
ಮೌನವಾದೆನು ನಿನ್ನ ಧ್ಯಾನಾನಂದದಿ ಈಗ ।
ಸಾನುರಾಗದಿ ಕಾಯೋ ಸನಕಾದಿವಂದ್ಯನೆ ॥೧॥

ಬಗೆಬಗೆಯಲಿ ನಿನ್ನ ಸ್ತುತಿಪೆನೋ ನಗಧರ ।
ಖಗಪತಿವಾಹನನೆ ।
ಮಗುವಿನ ಮಾತೆಂದು ನಗುತ ಕೇಳುತ ಬಂದೆ ।
ಬೇಗದಿಂದಲಿ ಕಾಯೋ ಸಾಗರಶಯನನೆ ॥೨॥

ಮಂದರಧರ ಅರವಿಂದಲೋಚನ ನಿನ್ನ ।
ಕಂದನೆಂದೆಣಿಸೊ ಎನ್ನ ।
ಸಂದೇಹವೇಕಿನ್ನು ಸ್ವಾಮಿ ಮುಕುಂದನೆ ।
ಬಂದೆನ್ನ ಕಾಯೋ ಶ್ರೀಪುರಂದರವಿಠಲ ॥೩॥

0 comments:

Popular Posts