ಕರ್ತಾ ಕೃಷ್ಣಯ್ಯ ನೀ ಬಾರಯ್ಯ
Friday, 20 March 2009
ಸಾಹಿತ್ಯ-ಪ್ರಸನ್ವೆಂಕಟದಾಸ
ಕರ್ತಾ ಕೃಷ್ಣಯ್ಯ ನೀ ಬಾರಯ್ಯ ।
ಎನ್ನಾರ್ತದನಿಗೊಲಿದು ಬಾರಯ್ಯ ॥
ಸುಗುಣದಖಣಿಯೆ ನೀ ಬಾರಯ್ಯ ।
ಎಮ್ಮಘವ ನೋಡಿಸಲು ನೀ ಬಾರಯ್ಯ ।
ಧಗೆಯೇರಿತು ತಾಪ ಬಾರಯ್ಯ ಸದಾ ।
ಮುಗುಳ್ನಗೆ ಮಳೆಗೆರೆಯೆ ಬಾರಯ್ಯ ॥೧॥
ವೈರಿವರ್ಗದಿ ನೊಂದೆ ಬಾರಯ್ಯ ।
ಮತ್ಯಾರೂ ಗೆಳೆಯರಿಲ್ಲ ಬಾರಯ್ಯ ।
ಸೇರಿದೆ ನಿನ್ನಯ ಕರುಣೆಗೆ ಬಾರಯ್ಯ ।
ಒಳ್ಳೆ ದಾರಿಯ ತೋರಲು ಬಾರಯ್ಯ ॥೨॥
ವೈರಾಗ್ಯಭಾಗ್ಯವ ಕೊಡಬಾರಯ್ಯ ।
ನಾನಾರೋಗದ ಭೇಷಜ ಬಾರಯ್ಯ ।
ಜಾರುತದಾಯು ಬೇಗ ಬಾರಯ್ಯ ।
ಉದಾರ ಪ್ರಸನ್ನವೆಂಕಟ ಬಾರಯ್ಯ ॥೩॥
0 comments:
Post a Comment