Pages

ರಾಜ ಬೀದಿಯೊಳಗಿಂದ

Friday, 20 March 2009

ಸಾಹಿತ್ಯ-ವಾದಿರಾಜತೀರ್ಥ


ರಾಜ ಬೀದಿಯೊಳಗಿಂದ ಕಸ್ತೂರಿರಂಗ ।
ತೇಜನೇರಿ ಮೆರೆದು ಬಂದ ॥

ಸುತ್ತಮುತ್ತಲು ಸಾವಿರಾರು ಸಾಲುದೀವಿಗೆ ।
ಹತ್ತುದಿಕ್ಕಿಲಿ ಬೆಳಗುತಿದ್ದ ಹಗಲು ಬತ್ತಿಯು ।
ನಿಸ್ತರಾದಿ ಭೂಸುರರು ಸುತ್ತುಗಟ್ಟಿ ನಿಂತಿರಲು ।
ಮತ್ತೆ ನಮ್ಮೊಳೆಂತು ತೇಜಿ ಮೆಲ್ಲನೆ ನಡೆಸುತ್ತ ಜಾಣ ॥೧॥

ತಾಳ ಶಂಖ ಭೇರಿ ತಂಬೂರಿ ಮೊದಲಾದ ।
ಮೇಲು ಪಂಚವಾದ್ಯಗಳೆಲ್ಲ ಹೊಗಳಿ ಹೊಗಳಲು ।
ಗಾಳಿಗೋಪುರದ ಮುಂದೆ ದಾಳಿಯಾಡುವಂತೆ ಸುತ್ತ ।
ಧೂಳಿಯನೆಬ್ಬಿಸಿ ವೈಯ್ಯಾಳಿಯ ನೀಕ್ಕುತ್ತ ಜಾಣ ॥೨॥

ವೇದಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲು ।
ಮೋದದಿಂದ ಗಾಯಕರು ಮೌರಿ ಪಾಡಲು ।
ಹಾದಿಬೀದಿಯಲ್ಲಿ ಭೂಸುರ ಜನರಿಗೆಲ್ಲ ।
ಆದರದಿಂದಿಷ್ಟಿತ ಅಮೃತಾನ್ನವನ್ನಿಕ್ಕುತ ॥೩॥

ರಂಭೆ ಮೊದಲಾದ ಸುರರಮಣಿಯರು ।
ತುಂಬಿದಾರುತಿಯ ಪಿಡಿದು ಕೂಡಿ ಪಾಡಲು ।
ಶಂಭುಮುಖ ನಿರ್ಜರನೆ ಪರಾಕೆನುತಲಿ ।
ಅಂಬುಧಿ ಭವಾಬ್ದಿಗಳ ಆಳಿದ ಶ್ರೀರಂಗನಾಥ ॥೪॥

ಹಚ್ಚನೇಗೆ ಸಾರುಬೇಳೆ ಹಾಲು ಕೆನೆಗಳು ।
ಮುಚ್ಚಿ ತಂದ ಕೆನೆಮೊಸರು ಮೀಸಲುಬೆಣ್ಣೆಯು ।
ಹಚ್ಚಿ ತುಪ್ಪ ಪಕ್ವವಾದ ಅತ್ತಿರಸ ಹುಗ್ಗಿಯನ್ನು ।
ಮೆಚ್ಚಿಯುಂಡು ಪಾನಕ ನೀರ್ ಮಜ್ಜಿಗೆಗಳ್ ಸವಿದು ಬೇಗ ॥೫॥

ಮುತ್ತಿನ ತುರಾಯಿ ಅಂಗಿ ಮುಂಡಾಸದಿ ।
ತಥ್ಥಳಿಪ ತಾಳಿವಜ್ರ ತಾಳಿಚೌಕುಳಿ ।
ಮುತ್ತಿನ ಕುಂಡಲನಿಟ್ಟು ಮೋಹಿಸುತ್ತ ಬೀದಿಯಲ್ಲಿ ।
ಕತ್ತಿಯ ಕೈಯ್ಯಲ್ಲಿ ಪಿಡಿದು ಮತ್ತಲ್ಲೆ ವಿರಾಜಿಸುತ ॥೬॥

ಸಣ್ಣ ಮುತ್ತು ಕೆತ್ತಿಸಿದ ಸಕಲಾತಿಗಳ್ ।
ಹೊನ್ನ ಹೊಸ ಜಾನ ಜಂಗುಳಿ ಹೊಳೆವ ಸೊಬಗಿನ ।
ಉನ್ನಂತ ಪರಾಯಣ ಉತ್ತಮ ರಾಜಶ್ವನೇರಿ ।
ಎನ್ನ ಹಯವದನರಂಗ ಎಲ್ಲರಿಗಿಷ್ಟಾರ್ಥ ಕೊಡುತ ॥೭॥

0 comments:

Popular Posts