ಆಡಲು ಹೋಗೋಣ ಬಾರೊ ರಂಗ
Monday, 8 February 2016
ಸಾಹಿತ್ಯ-ಶ್ರೀಪಾದರಾಜ
ಆಡಲು (ಆಡ/ಪೋಪು) ಹೋಗೋಣ ಬಾರೊ ರಂಗ, ಕೂಡಿ ಯಮುನೆ ತೀರದಲ್ಲಿ ।
ಚಿಣ್ಣಿಕೋಲು ಚೆಂಡು ಬುಗರಿ, ಬಣ್ಣಬಣ್ಣದ ಆಟಗಳನು ॥
ಜಾಹ್ನವಿಯ ತೀರವಂತೆ, ಜನಕರಾಯನ ಕುವರಿಯಂತೆ
ಜಾನಕೀ ವಿವಾಹವಂತೆ, ಜಾಣ ನೀನು ಬರಬೇಕಂತೆ ॥೧॥
ಕುಂಡನಿಯ ನಗರವಂತೆ, ಭೀಷ್ಮಕನ (ಭೀಷ್ಮಕರಾಯನ) ಕುವರಿಯಂತೆ,
ಶಿಶುಪಾಲನ ಒಲ್ಲಳಂತೆ, ನಿನಗೆ ಓಲೆ ಬರೆದಳಂತೆ ॥೨॥
ಕೌರವರಿಗೆ ಪಾಂಡವರು, ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಡಬೇಕಂತೆ, ರಂಗವಿಠಲ ಬರಬೇಕಂತೆ ॥೩॥
0 comments:
Post a Comment