ಪೊಂಗೊಳಲನೂದುತಿಹ ಯದುಕುಲೋತ್ತುಂಗ
Friday, 9 October 2015
ಸಾಹಿತ್ಯ-ಪುರಂದರದಾಸ
ಪೊಂಗೊಳಲನೂದುತಿಹ ಯದುಕುಲೋತ್ತುಂಗ ।
ತಿಂಗಳಪಾಂಗನೆ ರಜತಶುಭಾಂಗ ॥
ಸಲಿಲಗಾಚಲಧರನು ಇಳೆಧರೋಜ್ವಲನೇತ್ರ ।
ಬಲಿಯ ಬೇಡಿದನು ಭೃಗುಕುಲದಿ ಜನಿಸಿ ।
ಬಲಿದ ಬಿಲ್ಲನೆ ಮುರಿದು ಲಲನೆಯರ ವಶನಾಗಿ ।
ಹೂಳರ ಸಂಬೋಧಿಸಿದ ಚೆಲುವ ಹಯವವೇರ್ದ ॥೧॥
ಬಿಡದೆ ನೋಡಿದ ಬೆಟ್ಟದಡಿಗೆ ಬೆನ್ನನು ಕೊಟ್ಟ ।
ಅಡವಿಚರ ಕಡುಕೋಪಿ ಕೊಡೆಯ ಪಿಡಿದು ।
ಕೊಡಲಿಕರ ಜಡೆ ಧರಿಸಿ ಗಿಡ ಕಿತ್ತು ತಾ ಕೆಡಹಿ ।
ಹುಡುಗಿಯರ ಜಾರ ಸಡಗರದಿ ತೇಜಿಯನೇರ್ದ ॥೨॥
ವಾರಿಚರ ಕೂರ್ಮಾವತಾರ ಸೂಕರ ಕ್ರೂರ ।
ಧಾರಿಣಿಯನೆಳೆದು ಶೂರರನು ಗೆಲಿದು ।
ನೀರಜಾಕ್ಷಿಯ ತಂದು ನಾರಿಪ್ರಿಯ ವ್ರತವಳಿದು ।
ಏರಿದನು ಹಯವ ಶ್ರೀ ಪುರಂದರವಿಠಲ ॥೩॥
0 comments:
Post a Comment