Pages

ದಾಸನೆಂತಾಗುವೆನು ಧರೆಯೊಳಗೆ ನಾನು

Saturday, 14 March 2015

ಸಾಹಿತ್ಯ-ಪುರಂದರದಾಸ


ದಾಸನೆಂತಾಗುವೆನು ಧರೆಯೊಳಗೆ ನಾನು ।
ವಾಸುದೇವನಲಿ ಲೇಶಭಕುತಿಯ ಕಾಣೆ ॥

ಗೂಟ ನಾಮವ ಹೊಡೆದು ಗುಂಡು ತಂಬಿಗೆ ಹಿಡಿದು ।
ಗೋಟಂಚು ಮಡಿಯುಳ್ಳ ಧೋತರವನುಟ್ಟು ।
ದಾಟುಗಲಿಡುತ ನಾ ಧರೆಯೊಳಗೆ ಬರಲೆನ್ನ ।
ಬೂಟಕತನ ನೋಡಿ ಭ್ರಮಿಸದಿರಿ ಜನರೇ ॥೧॥

ಅರ್ಥದಲ್ಲೇ ಮನಸು ಆಸಕ್ತವಾಗಿದ್ದು ।
ವ್ಯರ್ಥವಾಯಿತು ಜನ್ಮ ವಸುಧೆಯೊಳಗೆ ।
ಅರ್ತಿಯಿಂದಲಿ ಹರಿಯ ಅರ್ಚಿಸಿದ್ದಲ್ಲೆ ನಾ ।
ಸತ್ಯ ಶೌಚಗಳರಿಯೆ ಸಜ್ಜನರು ಕೇಳಿ ॥೨॥

ಇಂದಿರೇಶನ ಪೂಜೆ ಎಂದೂ ಮಾಡಿದ್ದಿಲ್ಲ ।
ಸಂಧ್ಯಾನ ಜಪತಪವ ಒಂದನೂ ಅರಿಯೆ ।
ಒಂದೂ ಸಾಧನ ಕಾಣೆ ಪುರಂದರ ವಿಠಲನ ।
ದ್ವಂದ್ವ ಪಾದವ ನಂಬಿ ಅರಿತು ಭಜಿಸದಲೆ ॥೩॥

0 comments:

Popular Posts