Pages

ಭಾಗ್ಶದ ಲಕ್ಷ್ಮೀ ಬಾರಮ್ಮಾ

Tuesday 7 July 2009

ಸಾಹಿತ್ಯ-ಪುರಂದರದಾಸ


ಭಾಗ್ಶದ ಲಕ್ಷ್ಮೀ ಬಾರಮ್ಮ ।
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ ॥

ಹೆಜ್ಜೆಯ ಮೇಲೊಂದ್ಹೆಜ್ಜೆಯನಿಕ್ಕುತ ಗೆಜ್ಜೆ ಕಾಲ್ಗಳ ಧ್ವನಿಯ ಮಾಡುತ ।
ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ॥೧॥

ಕನಕ ವೃಷ್ಟಿಯ ಕರೆಯುತ ಬಾರೇ ಮನಕಾಮನೆಯ ಸಿಧ್ಧಿಯ ತೋರೇ ।
ದಿನಕರ ಕೋಟಿ ತೇಜದಿ ಹೊಳೆಯುವ ಜನಕರಾಯನ ಕುಮಾರಿ ಬೇಗ ॥೨॥

ಅತ್ತಿತ್ತಗಲದೆ ಭಕ್ತರ ಮನೆಯಲಿ ನಿತ್ಯಮಹೋತ್ಸವ ನಿತ್ಯಸುಮಂಗಳ ।
ಸತ್ಯವ ತೋರುವ ಸಾಧುಸಜ್ಜನರ ಚಿತ್ತದಿ ಹೊಳೆಯುವ ಪುಥ್ಥಳಿ ಗೊಂಬೆ ॥೩॥

ಸಂಖ್ಯೆ(ಅಂಕೆ)ಯಿಲ್ಲದ ಭಾಗ್ಯವ ಕೊಟ್ಟು ಕಂಕಣ ಕೈಯ ತಿರುವುತ ಬಾರೆ ।
ಕುಂಕುಮಾಕಿತೇ ಪಂಕಜ ಲೋಚನೆ ವೆಂಕಟರಮಣನ ಬಿಂಕದ ರಾಣಿ ॥೪॥

ಸಕ್ಕರೆ ತುಪ್ಪದ ಕಾಲುವೆ ಹರಿಸಿ ಶುಕ್ರವಾರದ ಪೂಜೆ ವೇಳೆಗೆ ।
ಅಕ್ಕರೆಯುಳ್ಳ ಅಳಗಿರಿರಂಗನ ಚೊಕ್ಕ ಪುರಂದರವಿಠಲನ ರಾಣಿ ॥೫॥

0 comments:

Popular Posts