Pages

ನಾನು ಕೋಳೀಕೇ ರಂಗಾ

Thursday, 11 March 2010

ಸಾಹಿತ್ಯ-ಟಿ.ಪಿ.ಕೈಲಾಸಮ್


ನಾನು ಕೋಳೀಕೇ ರಂಗಾ
ಕೋನೂ ಳೀನೂ ಕೇನೂ ರಾನೂ ಸೊನ್ನೆ ಗಾ
ಕಾಕೋತ್ವ ಳೀ ಕಾಕೇತ್ವ ರಾ ಮತ್ ಸೊನ್ನೆ ಗಾ
ಇದನ್ ಹಾಡಕ್ ಬರ್ದೇ ಬಾಯ್ ಬಿಡೋನು ...
ಬೆಪ್ನನ್ಮಗಾ ...
ನಮ್ಮ ತಿಪ್ಪಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಮಗಾ

ನಾವುಟ್ಟಿದ್ ದಡ್ರಳ್ಳಿ ಬೆಳೆದದ್ ಬ್ಯಾಡ್ರಳ್ಳಿ
ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ
ನಮ್ ಶ್ಯಾನುಭೋಗಯ್ಯ ಅಲ್ದೆ ಶೇಕ್ದಾರಪ್ಪಾ
ಇವರೆಲ್ಲಾ ಕಂಡವ್ರೆ ನನ್ನಾ

ಹೆಂಡ್ರನ್ನು ಮಕ್ಳನ್ನು ಬಿಟ್ಟು, ಹಟ್ಟಿ ಅವನ್ನು ಬಿಟ್ಟು, ಬಂದಿವ್ನಿ ನಾ
ನಿಮ್ಮುಂದೆ ನಿಂತಿವ್ನಿ ನಾ, ನಮ್ಮಳ್ಳಿ ಕಿಲಾಡಿ ಉಂಜಾ

ಎತ್ತಿಲ್ದ್ ಬಂಡಿಗ್ಳೂರೂ, ಎಣ್ಣಿಲ್ದ್ ದೀಪಗ್ಳೂರೂ, ತುಂಬಿದ್ ಮೈಸೂರಿಗ್ ಬಂದೇ
ದೊಡ್ ಚೌಕಟ್ ಮುಂದೆ, ದೊಡ್ ಗಾಡಿ ಯರಡ್ ಹಿಂದೇ, ಕಟಂಗಡೀಲ್ ಬುತ್ತೀ ತಿಂದಿದ್ದೇ
ಅಲ್ ಕುದ್ರೇಮೇಲ್ ಕುಂತಿದ್ದೇ

ಒಬ್ ಸಾಬ್ರಯ್ಯ ಎದುರಿಗ್ ಬಂದ್
ಮೀಸೇಮೇಲ್ ಆಕ್ತಾನ್ ತನ್ ಕೈಯ್ಯಾ
ಏಳ್ತಾನಣ್ಣಾ, ಗದರಸ್ತಲೀ ಬೆದರಸ್ತಲೀ,
ಏಯ್ ಯಾರೋ ಯಾಕೋ ಇಲ್ಲಿ ಅಂತಾ

ಹಾಹಾಹಾಹಾ ನಾನು ಕೋಳೀಕೆ ರಂಗಾ

ಈ ಹಾಡನ್ನು ಇಲ್ಲಿ ಕೇಳಿ


The above song is a spoof of "Constantinople"

Read more...

ಮೂರುತಿಯನೆ ನಿಲಿಸೋ

Tuesday, 9 March 2010

ಸಾಹಿತ್ಯ-ಪುರಂದರದಾಸ


ಮೂರುತಿಯನೆ ನಿಲಿಸೋ
ಮಾಧವ ನಿನ್ನ ಮೂರುತಿಯನೆ ನಿಲ್ಲಿಸೋ॥

ಎಳೆತುಳಸಿಯ ವನಮಾಲೆಯು ಕೊರಳೊಳು ।
ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ ॥೧॥

ಮುತ್ತಿನ ಸರ ನವರತ್ನದುಂಗುರವಿಟ್ಟು ।
ಮತ್ತೆ ಶ್ರೀ ಲಕುಮಿಯ ಉರದೊಳೊಪ್ಪುವ ನಿನ್ನ ॥ ೨ ॥

ಭಕ್ತರ ಕಾಮಧೇನು ಕಲ್ಪತರು ಎಂಬೋ (ಭಾಗ್ಯದ ಸುರಧೇನು ) ।
ಮುಕ್ತಿದಾಯಕ ನಮ್ಮ (ಸಿರಿ ) ಪುರಂದರವಿಠಲ ನಿನ್ನ ॥ ೩॥

Read more...

ಯಾಕೆ ಮೂಕನಾದ್ಯೋ

ಸಾಹಿತ್ಯ-ಜಗನ್ನಾಥದಾಸ


ಯಾಕೆ ಮೂಕನಾದ್ಯೋ ಗುರುವೆ ನೀ ಯಾಕೆ ಮೂಕನಾದ್ಯೋ ।
ಯಾಕೆ ಮೂಕನಾದೆ ಲೋಕಪಾಲಕ ಎನ್ನ ।
ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ॥

ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದಿ ।
ಮಂದಿಯೊಳಗೆ ಎನ್ನ ಮಂದನ್ನ ಮಾಡಿದ್ಯಲ್ಲೋ ॥ ೧ ॥

ಬೇಕಾಗದಿದ್ದರಿನ್ನ್ಯಾಕೆ ಕೈಯನು ಪಿಡಿದೆ ।
ಕಾಕುಜನರೊಳೆನ್ನ ನೂಕಿಬಿಟ್ಟು ನೀನು (/ನೀ) ॥ ೨ ॥

ಈಗ ಪಾಲಿಸದಿರೆ ಯೋಗಿಕುಲವರ್ಯ ।
ರಾಘವೇಂದ್ರನೆ ಭವ ಸಾಗುವುದ್ಹ್ಯಾಂಗಯ್ಯ ॥ ೩ ॥

ನಿನ್ನಂಥ ಕರುಣಿಯಿಲ್ಲ ಎನ್ನಂಥ ಕೃಪಣಿಯಿಲ್ಲ ।
ಘನ್ನಮಹಿಮ ನೀ ಎನ್ನನು ಬಿಟ್ಟೀಗ ॥ ೪ ॥

ಜನನಿಯು ನೀ (ಎನಗೆ) ಎನ್ನ ಜನಕನಯ್ಯ ।
ಮನ್ನಿಸೊ ನೀ ನಿತ್ಯಾನನ್ಯ ಶರಣನೆ (/ಶರಣ್ಯ) ॥ ೫ ॥

ಎಂದಿಗಾದರು ನಿನ್ನ ಪೊಂದಿಕೊಂಡವನಲ್ಲೋ ।
ಇಂದು ನೀ ಕೈಬಿಟ್ಟರೆನ್ನ ಮುಂದೆ ಕಾಯುವರ್ಯಾರೋ ॥ ೬ ॥

ನಾಥನು ನೀ ಅನಾಥನು ನಾನಯ್ಯ ।
ಪಾತಕರರಿ ಜಗನ್ನಾಥವಿಠ್ಠಲದೂತ (/ಜಗನ್ನಾಥವಿಠ್ಠಲದಾಸ) ॥ ೭ ॥

Read more...

ಯಾದವ ನೀ ಬಾ

ಸಾಹಿತ್ಯ-ಪುರಂದರದಾಸ


ಯಾದವ ನೀ ಬಾ ಯದುಕುಲನಂದನ
ಮಾಧವ ಮಧುಸೂದನ ಬಾರೋ
ಸೋದರ ಮಾವನ ಮಥುರೇಲಿ ಮಡುಹಿದ
ಯಶೋದೆಕಂದ ನೀ ಬಾರೋ ॥

ಶಂಖಚಕ್ರಗಳು ಕರದಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೋ
ಅಕಳಂಕಮಹಿಮ ಆದಿನಾರಾಯಣ
ಬೇಕೆಂಬ ಭಕುತರಿಗೊಲಿಬಾರೋ ॥೧॥

ಕಣಕಾಲಂದುಗೆ ಘಲುಘಲುರೆನುತಲಿ
ಝಣಝಣ ವೇಣುನಾದದಲಿ
ಚಿಣ್ಣಿಕೋಲು ಚೆಂಡು ಬುಗುರಿಯನಾಡುತ
ಸಣ್ಣ ಸಣ್ಣ ಗೋವಳರೊಡಗೂಡಿ ॥ ೨ ॥

ಖಗವಾಹನನೇ ಬಗೆಬಗೆ ರೂಪನೇ
ನಗುಮೊಗದರಸನೇ ನೀ ಬಾರೋ
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ
ಪುರಂದರವಿಠ್ಠಲ ನೀ ಬಾರೋ ॥ ೩॥

Read more...

ನೋಡಿ ಮರುಳಾಗದಿರು ಪರಸತಿಯರ

Friday, 5 March 2010

ಸಾಹಿತ್ಯ-ಕನಕದಾಸ


ನೋಡಿ ಮರುಳಾಗದಿರು ಪರಸತಿಯರ
ನಾಡೊಳಗೆ ಕೆಟ್ಟವರ ಪರಿಯ ನೀನರಿತು ॥

ಶತಮುಖವನೆ ಮಾಡಿ ಸುರಸಭೆಗೈದ ನಹುಷ ತಾ
ಆತುರದಿ ಶಚಿಗೆ ಮನಸೋತು ಭ್ರಮಿಸಿ
ಅತಿಬೇಗ ಚಲಿಸೆಂದು ಬೆಸಸಲಾ ಮುನಿಯಿಂದ
ಗತಿಗೆಟ್ಟು ಉರಗನಾಗಿದ್ದ ಪರಿಯ ನೀನರಿತು ॥೧॥

ಸುರಪತಿಯು ಗೌತಮನ ಸತಿಗಾಗಿ ಕಪಟದಿಂ
ಧರೆಗೆ ಮಾಯವೇಷ ಧರಿಸಿ ಬಂದು
ಪರಮ ಮುನಿಶಾಪದಿಂ ಅಂಗದೊಳು
ಸಾವಿರ ಕಣ್ಣಾಗಿ ಇದ್ದ ಪರಿಯ ನೀನರಿತು ॥೨॥

ಸ್ಮರನ ಶರತಾಪವನು ಪರಿಹರಿಸಲರಿಯದಲೆ
ದುರುಳ ಕೀಚಕನು ದ್ರೌಪದಿಯ ಕೆಣಕಿ
ಮರುತಸುತ ಭೀಮನಿಂದಿರುಳೊಳಗೆ ಹತನಾದ
ನರಕುರಿಯೆ ನಿನ್ನ ಪಾಡೇನು ಧರೆಯೊಳಗೆ ॥೩॥

ಹರನ ವರವನು ಪಡೆದು ಶರಧಿಮಧ್ಯದೊಳಿದ್ದು
ದುರುಳ ದಶಶಿರನು ಜಾನಕಿಯನೊಯ್ಯೆ
ಧುರದೊಳಗೆ ರಘುವರನ ಶರದಿಂದ ಈರೈದು
ಶಿರಗಳನೆ ಹೋಗಾಡಿಸಿಕೊಂಡ ಪರಿಯ ನೀನರಿತು ॥೩॥

ಇಂಥಿಂಥವರು ಕೆಟ್ಟು ಹೋದವರೆಂಬುದನರಿತು
ಭ್ರಾಂತಿಯನೆ ಬಿಟ್ಟು ಭಯಭಕ್ತಿಯಿಂದ
ಅಂತರಾತ್ಮಕ ಕಾಗಿನೆಲೆಯಾದಿ ಕೇಶವನ
ನಿರುತವು ನೀ ಭಜಿಸಿ ಸುಖಿಯಾಗೋ ಮನುಜ ॥೪॥

Read more...

ಬೇನೆ ತಾಳಲಾರೆ ಬಾ

ಸಾಹಿತ್ಯ-ಪುರಂದರದಾಸ


ಬೇನೆ ತಾಳಲಾರೆ ಬಾ ಎನ್ನ ಗಂಡ ಬೇನೆ ತಾಳಲಾರೆನು ॥

ಬೇಳೆ ಬೆಲ್ಲವ ತಂದು, ಹೋಳಿಗೆಯನು ಮಾಡಿ, ಬಾಳೆಹಣ್ಣ ತಂದು ಬದಿಯಲ್ಲಿ ಬಡಿಸಿ,
ಹಾಲು ಸಕ್ಕರೆ ಹದ ಮಾಡಿ ತಂದಿಡು, ಎರಕದ ಗಿಂಡಿಲಿ ನೀರ ತಾರೊ ಗಂಡ ॥೧॥

ಗಸಗಸೆ ಲಡ್ಡಿಗೆ, ಹಸನಾದ ಕೆನೆ ಹಾಲು, ಬಿಸಿಯ ಹುರಿಗಡಲೆ, ಬಿಳಿಯ ಬೆಲ್ಲ,
ರಸದಾಳಿ ಕಬ್ಬು ಸುಲಿದು ಮುಂದಿಟ್ಟರೆ ವಿಷವಿಷವೆಂದು ನಾ ತಿಂಬೆನೊ ॥೨॥

ಹಪ್ಪಳ ಕರಿದಿಡು, ಸಂಡಿಗೆ ಹುರಿದಿಡು, ತುಪ್ಪದಿ ನಾಲ್ಕು ಚಕ್ಕುಲಿ ಕರಿದು,
ಬಟ್ಟಲೊಳು ತುಪ್ಪ ಕೆನೆ ಮೊಸರ ಹಾಕಿಡು, ಬಚ್ಚಲಿಗೆ ಬರುತೇನೆ ನೀರ ಹದಮಾಡೊ ॥೩॥

ಎಣ್ಣೆ ಬದನೆಕಾಯಿ, ಬೆಣ್ಣೆ ಸಜ್ಜಿಯ ರೊಟ್ಟಿ, ಸಣ್ಣಕ್ಕಿಬೋನ ಬದಿಯಲಿಟ್ಟು,
ಸಣ್ಣ ತುಂಚಿಯ ಲಿಂಬೆ, ಲಲಮಾಗಡಿಬೇರು, ಉಣ್ಣುಣ್ಣು ಎಂದರೆ ಉಂಬೆನೊ ಗಂಡ ॥೪॥

ಗಂಧ ಕುಂಕುಮವನು ಬದಿಯಲಿ ತಂದಿಡು, ಮಡಿಯಲಿ ತಂಬಿಗೆ ನೀರ ತಾರೋ,
ಮಣೆಯನ್ನೆ ಹಾಕಿ ಕೆಳಗೆ ಬಟ್ಟಲಿಡು, ತೀರ್ಥವನೆ ತೊಕ್ಕೊಂಡು ನಾ ಬರುತೇನೆ ಗಂಡ ॥೫॥

ನಾನುಂಡು ಇದ್ದದ್ದು ಬಾಲರಿಗುಣಲಿಕ್ಕೆ ಮೇಲಿಟ್ಟು ಮುಚ್ಚಿಡೋ ಎನ್ನ ಗಂಡ,
ಸ್ನಾನ ಮಾಡಿಕೊಂಡು, ಸೀರೆಯ ತೆಕ್ಕೊಟ್ಟು, ತಾಂಬೂಲ ತೆಕ್ಕೊಂಡು ಬಾರೊ ನನ್ನ ಗಂಡ ॥೬॥

ಸಣ್ಣ ನುಚ್ಚು ಇಟ್ಟುಕೊ, ಗೊಡ್‍ಹುಳಿ ಕಾಸಿಕೊ, ದೊನ್ನೆಯೊಳಗೆ ತುಪ್ಪ ಬಡಿಸಿಕೊ,
ಎಣ್ಣೆ ತಟಕು ಉಪ್ಪಿನಕಾಯಿ ಸಂಗಾತ ಚೆನ್ನಾಗಿ ಉಣ ಬಂದು ಕಾಲೊತ್ತೊ ಗಂಡ ॥೭॥

ಹೋಳಿಯ ಹುಣ್ಣಿಮೆ ತಣ್ಣನೆ ತಂಗಾಳಿ ಚಳಿ ಬಹಳ ಗಂಡ ಕದವ ಮುಚ್ಚೊ
ಮಂಚದ ಮೇಲೆ ಮಲಗಿದೆನ್ನನು ಸಕಲಾದಿ ಹಚ್ಚಡ ಬಿಗಿ ಬಿಗಿದ್‍ಹೊಚ್ಚೊ ॥೮॥

ಸದ್ದು ಮಾಡದ ಹಾಗೆ ಎದ್ದು ಕದವ ಮುಚ್ಚೊ ಮುದ್ದು ಸ್ವಾಮಿಯನ್ನೆ ನೆನವುತಲಿ
ಮುದ್ದು ಶ್ರೀ ಪುರಂದರ ವಿಠ್ಠಲನ ನೆನೆವುತ ನೀನೊಂದು ಮೂಲೇಲಿ ಬಿದ್ದುಕೊಳ್ಳೋ ಗಂಡ ॥೯॥

Read more...

ಹಣ್ಣು ಬಂದಿದೆ ಕೊಳ್ಳಿರೋ ನೀವೀಗ

ಸಾಹಿತ್ಯ-ಪುರಂದರದಾಸ


ಹಣ್ಣು ಬಂದಿದೆ ಕೊಳ್ಳಿರೋ ನೀವೀಗ
ಚೆನ್ನಬಾಲಕೃಷ್ಣನೆಂಬೊ ಚೆನ್ನಾದ ಬಾಳೆಯಹಣ್ಣು ॥

ಹವ್ಯಕವ್ಯದ ಹಣ್ಣು ಸವಿವ ಸಕ್ಕರೆಹಣ್ಣು
ಭವರೋಗಗಳನೆಲ್ಲ ಕಳೆವ ಹಣ್ಣು,
ನವನೀತ ಚೋರನೆಂಬ ಯಮನ ಅಂಜಿಪ ಹಣ್ಣು
ಅವನಿಯೊಳ್ ಶ್ರೀರಾಮನೆಂಬೊ ಹಣ್ಣು ॥೧॥

ಕೊಳೆತು ಹೋಗುವುದಲ್ಲ ಹುಳಿತು ಹೋಗುವುದಲ್ಲ
ಕಳೆದು ಬಿಸಾಡಿಸಿ ಕೊಳ್ಳುವುದಲ್ಲ,
ಅಳೆದು ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೊದಲ್ಲ
ಒಳಿತಾದ ಹರಿಯೆಂಬೊ ಮಾವಿನಹಣ್ಣು ॥೨॥

ಕೆಟ್ಟು ನಾರುವುದಲ್ಲ ಬಿತ್ತಿ ಬೆಳೆಯೋದಲ್ಲ
ಕಷ್ಟದಿ ಹಣಕೊಟ್ಟು ಕೊಂಬುವುದಲ್ಲ,
ಸೃಷ್ಟಿಯೊಳಗೆ ನಮ್ಮ ಪುರಂದರವಿಠ್ಠಲ
ಕೃಷ್ಣರಾಯನೆಂಬೊ ಶ್ರೇಷ್ಠವಾದ ಹಣ ॥೩॥

Read more...

ಹಣ್ಣು ಮಾರುವವನ ಹಾಡು

ಸಾಹಿತ್ಯ-ಕಯ್ಯಾರ ಕಿಜ್ಞಣ್ಣ ರೈ


ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತೀಳೆ,
ಬೀದರ ಜಿಲ್ಲೆಯ ಸೀಬೆಯ ಹಣ್ಣು, ಬೆಂಗಳೂರಿನ ಸೇಬಿನ ಹಣ್ಣು,
ಕೊಳ್ಳಿರಿ ಹಿಗ್ಗನು ಹರಿಸುವವು, ಕಲ್ಲುಸಕ್ಕರೆಯ ಮರೆಸುವವು ॥೧॥

ಕೊಳ್ಳಿರಿ ಮಧುಗಿರಿ ದಾಳಿಂಬೆ, ಬೆಳವಲ ಬಯಲಿನ ಸಿಹಿಲಿಂಬೆ,
ಬೆಳಗಾವಿಯ ಸವಿ ಸಪೋಟ, ದೇವನಹಳ್ಳಿಯ ಚಕ್ಕೋತ,
ನಾಲಿಗೆ ಬರವನು ಕಳೆಯುವವು, ದೇಹದ ಬಲವನು ಬೆಳೆಸುವವು ॥೨॥

ಗಂಜಾಮ್ ಅಂಜೀರ್, ತುಮಕೂರ ಹಲಸು,
ಧಾರವಾಡದ ಆಪೂಸು, ಮಲೆನಾಡಿನ ಅನಾನಸು,
ಸವಿಯಿರಿ ಬಗೆಬಗೆ ಹಣ್ಣುಗಳ, ಕನ್ನಡ ನಾಡಿನ ಹಣ್ಣುಗಳ॥೩॥

Read more...

गुलों में रंग भरे बाद-ए-नौबहार चले

Thursday, 3 December 2009

साहित्य - फ़ैज़ अहमद फ़ैज़
गायन - मेहदी हसन


गुलों में रंग भरे बाद-ए-नौबहार चले |
चले भी आओ के गुलशन का कारोबार चले ॥

क़फ़स उदास है यारो सबा से कुछ तो कहो |
कहीं तो बह्र-ए-ख़ुदा आज ज़िक्र-ए-यार चले ॥१॥

कभी तो सुबह तेरे कुंज-ए-लब से हो आगा़ज़ |
कभी तो शब सर-ए-काकुल से मुश्कबार चले ॥२॥

बड़ा है दर्द का रिश्ता यह दिल ग़रीब सही |
तुम्हारे नाम पे आयेंगे ग़मगु़सार चले ॥३॥

जो हम पे गु़ज़री सो गु़ज़री मगर शब-ए-हिज्रां |
हमारे अश्क तेरि आक़बत संवर चले ॥४॥

हुज़ूर-ए-यार हुई दफ़्तर-ए-जुनूं की तलब |
गिरह में लेके गरेबां के तार तार चले ॥५॥

मक़ाम फ़ैज़ कोई राह में जचा ही नहीं |
जो कू-ए-यार से निकले तो सू-ए-दार चले ॥६॥

बाद-ए-नौबहार=Breeze of new spring
क़फ़स=Cage
सबा=Breeze
कुंज-ए-लब=Sweet Lips
बह्र-ए-ख़ुदा=For God's sake
आगा़ज़=Free
शब=Night
सर-ए-काकुल=Fragrant wavy head (hair)
मुश्कबार=Encompass
ग़मगुसार=Loyal follower
अश्क=tears
आक़बत=Fate/destiny
आक़बत संवर चले=make destiny succeed
मक़ाम=Destination
कू-ए-यार=Corner of the beloved (beloved's place)
सू-ए-दार=Death's platform

Read more...

ಚಿಂತೆ ಯಾತಕೋ

Sunday, 8 November 2009

ಸಾಹಿತ್ಯ-ಪುರಂದರದಾಸ


ಚಿಂತೆ ಯಾತಕೋ, ಬಯಲ ಭ್ರಾಂತಿ ಯಾತಕೋ ॥
ಕಂತು ಪಿತನ ದಿವ್ಯ ನಾಮ ಮಂತ್ರವನ್ನು ಜಪಿಸುವವಗೆ ॥

ಕಾಲ ಕಾಲದಲ್ಲಿ ಬಿಡದೆ ವೇಳೆಯರಿತು ಕೂಗುವಂಥ
ಕೋಳಿ ತನ್ನ ಮರಿಗೆ ಮೊಲೆಯ ಹಾಲ ಕೊಟ್ಟು ಸಲಹಿತೆ ॥೧॥

ಸಡಗರದ ನಾರಿಯರು ಹಡೆಯುವಾಗ ಸೂಲಗಿತ್ತಿ
ಅಡವಿಯೊಳಗೆ ಹೆರುವ ಮೃಗವ ಹಿಡಿದು ರಕ್ಷಿಸುವರ್ಯಾರು ॥೨॥

ಹೆತ್ತ ತಾಯಿ ಸತ್ತು ಹೋಗಲು ಕೆಟ್ಟೆನೆಂಬರು ಲೋಕ ಜನರು
ಮತ್ತೆ ಗುಂಗುರಿಗೆ ತಾಯಿ ಹತ್ತಿರಿದ್ದು ಸಲಹಿತೆ ॥೩॥

ಗಟ್ಟಿ ಮಣ್ಣ ಶಿಶುವ ಮಾಡಿ ಹೊಟ್ಟೆಯೊಳಗೆ ಇರಿಸಲಿಲ್ಲ
ಕೊಟ್ಟ ದೈವಕೊಂಡು ಹೋದರೆ ಕುಟ್ಟಿಕೊಂಡು ಅಳುವೆಯೇಕೆ ॥೪॥

ಪರದಲ್ಲಿ ಪದವಿಯುಂಟು ಇಹದಲ್ಲಿ ಸೌಖ್ಯವುಂಟು
ಗುರು ಪುರಂದರವಿಠಲನ್ನ ಸ್ಮರಣೆಯನ್ನು ಮರೆಯದವಗೆ ॥೫॥

Read more...

Popular Posts