Pages

ರಾಮ ರಾಮ ರಾಮ ಸೀತಾರಾಮ

Monday, 3 February 2014

ಸಾಹಿತ್ಯ-ಪುರಂದರದಾಸ


ರಾಮ ರಾಮ ರಾಮ ಸೀತಾರಾಮ ಎನ್ನಿರೋ ।
ಅಮರಪತಿಯ ದಿವ್ಯ ನಾಮ ಅಂದಿಗೊದಗಿ ಬಾರದೋ ॥

ಭರದಿ ಯಮನ ಭಟರು ಬಂದು ಹೊರಡಿರೆಂದು ಮೆಟ್ಟಿ ಮುರಿಯೆ ।
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನವೊದಗದೋ॥೧॥

ಇಂದ್ರಿಯಂಗಳೆಲ್ಲ ಕೂಡಿ ಬಂದು ತನುವ ಮುಸುಕಿದಾಗ ।
ಸಿಂಧುಸುತೆಯ ಪತಿಯನಾಮ ಅಂದಿಗೊದಗಿಬಾರದೋ ॥೨॥

ಶ್ವಾಸೋಛ್ವಾಸವೆರಡು ಕಂಠದೇಶದಲ್ಲಿ ಸಿಲುಕಿದಾಗ ।
ವಾಸುದೇವನೆಂಬನಾಮ ಆ ಸಮಯಕೊದಗದೋ ॥೩॥

ಶೃಂಗಾರ್ಧ ದೇಹವೆಲ್ಲ ಅಂಗ ಮುರಿದು ಬೀಳುವಾಗ ।
ಕಂಗಳಿಗಾತ್ಮ ಸೇರಿದಾಗ ಶ್ರೀರಂಗನ ನಾಮವೊದಗದೋ ॥೪॥

ವಾತಪಿತ್ಥವೆರಡು ಕೂಡಿ ಈ ತನುವನಾವರಿಸಿ ।
ಧಾತುಗುಂದಿದಾಗ ರಘುನಾಥನ ಧ್ಯಾನವೊದಗದೋ ॥೫॥

ಕಲ್ಲು ಮರನಾಗಿ ಜ್ಞಾನವಿಲ್ಲದಾಗ ಮರಣವೊದಗೆ ।
ಫುಲ್ಲನಾಭ ಕೃಷ್ಣನೆಂದು ಸೊಲ್ಲು ಬಾಯಿಗೊದಗದೋ ॥೬॥

ಕೆಟ್ಟ ಜನ್ಮದಲ್ಲಿ ಪುಟ್ಟಿ ದುಷ್ಟಕರ್ಮ ಮಾಡಿ ದೇಹ ।
ಬಿಟ್ಟು ಹೋಗುವಾಗ ಪುರಂದರವಿಠಲನ ನಾಮವೊದಗದೋ ॥೭॥

0 comments:

Popular Posts