Pages

ದಾರಿಯಾವುದಯ್ಯ ವೈಕು೦ಠಕೆ

Monday, 15 February 2016

ಸಾಹಿತ್ಯ-ಪುರಂದರದಾಸ


ದಾರಿಯಾವುದಯ್ಯ ವೈಕು೦ಠಕೆ ದಾರಿ ತೋರಿಸಯ್ಯ ।
ಅಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ ॥

ಅನುಭವದ ಅನುಭವದಿ ಕತ್ತಲೆಯೂಳು ಬಲು ಅ೦ಜುವೆ ನಡುಗಿ ।
ಬಳಲುತ್ತ ತಿರುಗಿದೆ ಹಾದಿಯ ಕಾಣದೆ ಹೋಳೆವ೦ತ ದಾರಿಯ ತೋರೋ ನಾರಾಯಣ ॥೧॥

ಪಾಪ ಪೋವ೯ದಲ್ಲಿ ಮಾಡಿದುದಕ್ಕೆ ಲೇಪವಾಗಿದೆ ಕಮ೯ ।
ಈ ಪರಿಯಿ೦ದಲಿ ನಿನ್ನ ನೆನೆಸಿಕೊ೦ಬೆ ಶ್ರೀಪತಿ ಸಲಹೆನ್ನ ಧೂಪನಾರಾಯಣ ॥೨॥

ಇನ್ನು ನಾ ಜನಿಸಲಾರೆ ಭೂಮಿಯಮೇಲೇ ನಿನ್ನ ದಾಸಾನಾದೇನೂ ।
ಪನ್ನಗಶಯನ ಶ್ರೀ ಪುರ೦ದರವಿಠಲ ಇನ್ನು ಪುಟ್ಟಿಸದಿರು ಎನ್ನ ನಾರಾಯಣ ॥೩॥

0 comments:

Popular Posts