Pages

वह जो हम में तुम में क़रार था

Monday, 22 February 2016

साहित्य - मोमिन ख़ान मोमिन
संगीत, गायन - मधूरानी फ़ैज़ाबादी

वह जो हम में तुम में क़रार था तुम्हें याद हो के ना याद हो ।
वही यानी वादा-निबाह का तुम्हें याद हो के ना याद हो ॥

वह जो लुत्फ़ मुझ पे थे पेश्तर, वह क़रम के था मेरे हाल पर ।
मुझे सब है याद ज़रा ज़रा तुम्हें याद हो के ना याद हो ॥१॥

वह नए गिले वह शिक़ायतें वह मज़े मज़े की हिकायतें ।
वह हर एक बात पे रूठना तुम्हें याद हो के ना याद हो ॥२॥

कहीं बैठे सब हैं जो रू-बा-रू, तो इशारतों ही में गुफ्तगू ।
वह बयान शौक़ का बरमला तुम्हें याद हो की ना याद हो ॥३॥

हुए इत्तेफ़ाक से गर बहम, वह वफ़ा जताने को दम-बा-दम ।
गिला-ए-मलामत-ए-अक्र्बा तुम्हें याद हो के ना याद हो ॥४॥

कोई बात ऐसी अगर हुई जो तुम्हारे जी को बुरी लगी ।
तो बयान से पहले ही भूलना तुम्हें याद हो के ना याद हो ॥५॥

कभी हम में तुम में भी चाह थी कभी हम से तुम से भी राह थी ।
कभी हम भी तुम भी थे आशना तुम्हें याद हो के ना याद हो ॥६॥

सुनो ज़िक्र है कई साल का के किया एक आप ने वादा था ।
सो निभाने का तो ज़िक्र क्या तुम्हें याद हो के ना याद हो ॥७॥

कहा मैंने वह बात कोठी की मेरे दिल से साफ़ उतर गई ।
तो कहा के जान-ए-मेरी बला तुम्हें याद हो के ना याद हो ॥८॥

वह बिगड़ना वस्ल की राल का वह ना मानना किस्सी बात का ।
वह नहीं नही की हर आन अदा तुम्हें याद हो के ना याद हो ॥९॥

जिसे आप गिनते थे आशना जिसे आप कहते थे बा-वफ़ा ।
मैं वही हूँ मोमिन-ए-मुब्तला तुम्हें याद हो के ना याद हो ॥१०॥


क़रार=Quietude
यानी=Namely, That Is To Say
वादा-निबाह=Loyalty to Promises
लुत्फ़=Favor, Grace
पेश-तर=Before, prior
क़रम=Benevolence, Kindness
गिला=Lamentation
शिक़ायत=Complaint, Accusation
हिकायत=Anecdote
रू-बा-रू=Face To Face
इशारत=love-glances, ogling
गुफ्तगू=Conversation
बरमला=Publicly, in the open
इत्तेफ़ाक=Accident, Chance
बहम=Gather, Together
दम-बा-दम=Every breath, Continuously
मलामत=Rebuke
अकरब=near and dear, loved ones
गिला-ए-मलामत-ए-अक्र्बा=Rebukes to a loved one
राह=Peace, satisfaction
आशना=Acquaintance
ज़िक्र=Mention
कोठी=Mansion, Residence
बला=Calamity, Distress
वस्ल=Meeting, Union
आन=Moment
मुब्तला=Embroiled In, Confused

Madhurani Faizabadi performs :

Read more...

ನೀನೇ ದಯಾಳೋ ನಿರ್ಮಲಚಿತ್ತ ಗೋವಿಂದ

Monday, 15 February 2016

ಸಾಹಿತ್ಯ-ಪುರಂದರದಾಸ


ನೀನೇ ದಯಾಳೋ ನಿರ್ಮಲಚಿತ್ತ ಗೋವಿಂದ, ನಿಗಮಗೋಚರ ಮುಕುಂದ ।
ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು, ಮಾನದಿಂದಲಿ ಕಾವ ದೊರೆಗಳ ನಾ ಕಾಣೆ ॥

ದಾನವಾಂತಕ ದೀನಜನಮಂದಾರನೆ, ಧ್ಯಾನಿಪರ ಮನಸಂಚಾರನೆ ।
ಮೌನವಾದೆನು ನಿನ್ನ ಧ್ಯಾನಾನಂದದಿ ಈಗ, ಸಾನುರಾಗದಿ ಕಾಯೋ ಸನಕಾದಿವಂದ್ಯನೆ ॥೧॥

ಬಗೆಬಗೆಯಲಿ ನಿನ್ನ ಸ್ತುತಿಪೆನೋ ನಗಧರ, ಖಗಪತಿವಾಹನನೆ ।
ಮಗುವಿನ ಮಾತೆಂದು ನಗುತ ಕೇಳುತ ಬಂದೆ, ಬೇಗದಿಂದಲಿ ಕಾಯೋ ಸಾಗರಶಯನನೆ ॥೨॥

ಮಂದರಧರ ಅರವಿಂದಲೋಚನ ನಿನ್ನ, ಕಂದನೆಂದೆಣಿಸೊ ಎನ್ನ ।
ಸಂದೇಹವೇಕಿನ್ನು ಸ್ವಾಮಿ ಮುಕುಂದನೆ, ಬಂದೆನ್ನ ಕಾಯೋ ಶ್ರೀಪುರಂದರವಿಠಲ ॥೩॥

Read more...

ದಾರಿಯಾವುದಯ್ಯ ವೈಕು೦ಠಕೆ

ಸಾಹಿತ್ಯ-ಪುರಂದರದಾಸ


ದಾರಿಯಾವುದಯ್ಯ ವೈಕು೦ಠಕೆ ದಾರಿ ತೋರಿಸಯ್ಯ ।
ಅಧಾರ ಮೂರುತಿ ನಿನ್ನ ಪಾದ ಸೇರುವುದಕ್ಕೆ ॥

ಅನುಭವದ ಅನುಭವದಿ ಕತ್ತಲೆಯೂಳು ಬಲು ಅ೦ಜುವೆ ನಡುಗಿ ।
ಬಳಲುತ್ತ ತಿರುಗಿದೆ ಹಾದಿಯ ಕಾಣದೆ ಹೋಳೆವ೦ತ ದಾರಿಯ ತೋರೋ ನಾರಾಯಣ ॥೧॥

ಪಾಪ ಪೋವ೯ದಲ್ಲಿ ಮಾಡಿದುದಕ್ಕೆ ಲೇಪವಾಗಿದೆ ಕಮ೯ ।
ಈ ಪರಿಯಿ೦ದಲಿ ನಿನ್ನ ನೆನೆಸಿಕೊ೦ಬೆ ಶ್ರೀಪತಿ ಸಲಹೆನ್ನ ಧೂಪನಾರಾಯಣ ॥೨॥

ಇನ್ನು ನಾ ಜನಿಸಲಾರೆ ಭೂಮಿಯಮೇಲೇ ನಿನ್ನ ದಾಸಾನಾದೇನೂ ।
ಪನ್ನಗಶಯನ ಶ್ರೀ ಪುರ೦ದರವಿಠಲ ಇನ್ನು ಪುಟ್ಟಿಸದಿರು ಎನ್ನ ನಾರಾಯಣ ॥೩॥

Read more...

ಮಡಿ ಮಡಿ ಮಡಿಯೆಂದು ಅಡಿಗಡಿಗ್ಹಾರುವೆ

Monday, 8 February 2016

ಸಾಹಿತ್ಯ-ಪುರಂದರದಾಸ


ಮಡಿ ಮಡಿ ಮಡಿಯೆಂದು ಅಡಿಗಡಿಗ್ಹಾರುವೆ, ಮಡಿ ಮಾಡುವ ಬಗೆ ಬೇರುಂಟು ।
ಪೊಡವಿ ಪಾಲಕನ ಪಾದಧ್ಯಾನವನು, ಬಿಡದೆ ಮಾಡುವುದದು ಮಡಿಯು ॥

ಬಟ್ಟೆಯ ನೀರೊಳಗದ್ದಿ ಒಣಗಿಸಿ ಉಟ್ಟುಕೊಂಡರೆ ಅದು ಮಡಿಯಲ್ಲ ।
ಹೊಟ್ಟೆಯೊಳಗಿನ ಕಾಮ-ಕ್ರೋಧ-ಮದ-ಮತ್ಸರ ಬಿಟ್ಟು ನಡೆದರೆ ಅದು ಮಡಿಯು ॥೧॥

ದಶಮಿ-ದ್ವಾದಶಿ ಪುಣ್ಯದಿನದಲಿ ವಸುದೇವಸುತನನು ಪೂಜಿಸದೆ ।
ದೋಷಕಂಜದೆ, ಪರರನ್ನ ಭುಂಜಿಸಿ ಯಮಪಾಶಕೆ ಸಿಲುಕುವುದದು ಮಡಿಯೇ ॥೨॥

ಹಸಿದು ಭೂಸುರರು ಮಧ್ಯಾಹ್ನಕಾಲಕೆ ಕುಸಿದು ಮನಗೆ ಬಳಲುತ ಬಂದರೆ ।
ಮಸಣಿಗೊಂದು ಗತಿಯಿಲ್ಲವೆಂದು ತಾ ಹಸನಾಗಿ ಉಂಬೋದು ಹೊಲೆ ಮಡಿಯು ॥೩॥

ಇಚ್ಚೆಯಿಂದ ಮಲಮೂತ್ರ ಶರೀರವ ನೆಚ್ಚಿ ತೊಳೆಯಲು ಅದು ಮಡಿಯೇ ।
ಅಚ್ಯುತಾನಂತನ ನಾಮವ ನೆನೆದು ಸಂಚಿತ ಕಳೆವುದು ಅದು ಮಡಿಯು ॥೪॥

ಹಿರಿಯರ, ಗುರುಗಳ, ಹರಿದಾಸರುಗಳ ಚರಣಕೆರಗಿ ಬಲು ಭಕ್ತಿಯಲಿ ।
ಪರಿಪಾಲಿಸು ಎಂದು ಪುರಂದರವಿಠಲನ ಇರುಳು-ಹಗಲು ಸ್ಮರಿಸುವುದು ಮಡಿಯು ॥೫॥

Read more...

ಆಡಲು ಹೋಗೋಣ ಬಾರೊ ರಂಗ

ಸಾಹಿತ್ಯ-ಶ್ರೀಪಾದರಾಜ


ಆಡಲು (ಆಡ/ಪೋಪು) ಹೋಗೋಣ ಬಾರೊ ರಂಗ, ಕೂಡಿ ಯಮುನೆ ತೀರದಲ್ಲಿ ।
ಚಿಣ್ಣಿಕೋಲು ಚೆಂಡು ಬುಗರಿ, ಬಣ್ಣಬಣ್ಣದ ಆಟಗಳನು ॥

ಜಾಹ್ನವಿಯ ತೀರವಂತೆ, ಜನಕರಾಯನ ಕುವರಿಯಂತೆ
ಜಾನಕೀ ವಿವಾಹವಂತೆ, ಜಾಣ ನೀನು ಬರಬೇಕಂತೆ ॥೧॥

ಕುಂಡನಿಯ ನಗರವಂತೆ, ಭೀಷ್ಮಕನ (ಭೀಷ್ಮಕರಾಯನ) ಕುವರಿಯಂತೆ,
ಶಿಶುಪಾಲನ ಒಲ್ಲಳಂತೆ, ನಿನಗೆ ಓಲೆ ಬರೆದಳಂತೆ ॥೨॥

ಕೌರವರಿಗೆ ಪಾಂಡವರು, ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಡಬೇಕಂತೆ, ರಂಗವಿಠಲ ಬರಬೇಕಂತೆ ॥೩॥

Read more...

Popular Posts