Pages

ಆವ ರೋಗವು ಎನಗೆ ದೇವ ಧನ್ವಂತ್ರಿ

Friday, 20 March 2009

ಸಾಹಿತ್ಯ-ಗೋಪಾಲದಾಸ


ಆವ ರೋಗವು ಎನಗೆ ದೇವ ಧನ್ವಂತ್ರಿ ।
ಸಾವಧಾನದಿ ಎನ್ನ ಕೈ ಪಿಡಿದು ನೋಡಯ್ಯ ॥

ಹರಿಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆ ।
ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ ।
ಹರಿಮಂತ್ರಸ್ತೋತ್ರ ಬಾರದು ಎನ್ನ ನಾಲಿಗೆಗೆ ।
ಹರಿಪ್ರಸಾದವು ಎನಗೆ ಸವಿಯಾಗದಯ್ಯ ॥೧॥

ಹರಿಪಾದಸೇವೆಗೆನ್ನ ಹಸ್ತಗಳು ಚಲಿಸವು ।
ಹರಿಗುರುಗಳಂಘ್ರಿಗೆ ಶಿರಬಾಗದಯ್ಯ ।
ಹರಿಯ ನಿರ್ಮಾಲ್ಯ ಆಘ್ರಾಣಿಸದು ನಾಸಿಕವು ।
ಹರಿಯಾತ್ರೆಗೆನ್ನ ಕಾಲೇಳವಯ್ಯ ॥೨॥

ಅನಾಥಬಂಧು ಗೋಪಾಲವಿಠಲರೇಯ ।
ಎನ್ನಭಾಗದ ವೈದ್ಯ ನೀನೆಯಾಗಯ್ಯ ।
ಅನಾದಿಕಾಲದ ಭವರೋಗ ಕಳೆಯಯ್ಯ ।
ನಾನೆಂದಿಗೂ ಮರೆಯೆ ನೀ ಮಾಡಿದುಪಕಾರ ॥೩॥

0 comments:

Popular Posts