Pages

ಹರಿದಾಸರ ಸಂಗ

Friday 20 February 2009

ಸಾಹಿತ್ಯ-ಪುರಂದರದಾಸ


ಹರಿದಾಸರ ಸಂಗ ದೊರಕಿತು ಎನಗೀಗ ಇನ್ನೇನಿನ್ನೇನು ।
ವರಗುರು ಉಪದೇಶ ನೆರವಾಯ್ತು ಎನಗೀಗ ಇನ್ನೇನಿನ್ನೇನು ॥

ಮಾಯದ ಸಂಸಾರ ಮಮಕಾರ ತಗ್ಗಿತು ಇನ್ನೇನಿನ್ನೇನು ।
ತೋಯಜಾಕ್ಷನ ನಾಮ ಜಿಹ್ವೆಯೊಳ್ ನೆಲೆಸಿತು ಇನ್ನೇನಿನ್ನೇನು ॥೧॥

ಹಲವು ದೈವಗಳೆಂಬ ಹಂಬಲ ಬಿಟ್ಟಿತು ಇನ್ನೇನಿನ್ನೇನು ।
ಜಲಜನಾಭನ ಧ್ಯಾನ ಹೃದಯದೊಳ್ ದೊರಕಿತು ಇನ್ನೇನಿನ್ನೇನು ॥೨॥

ತಂದೆ ತಾಯಿ ಮುಚಕುಂದವರದನಾದ ಇನ್ನೇನಿನ್ನೇನು ।
ಸಂದೇಹವಿಲ್ಲದೆ ಮುಕುಂದ ದಯಮಾಡ್ವ ಇನ್ನೇನಿನ್ನೇನು ॥೩॥

ಏನೆಂದು ಹೇಳಲಿ ಆನಂದ ಸಂಭ್ರಮ ಇನ್ನೇನಿನ್ನೇನು ।
ಆನಂದಗೋಪನ ಕಂದನ ಮಹಿಮೆಯ ಇನ್ನೇನಿನ್ನೇನು ॥೪॥

ಎನ್ನ ವಂಶಗಳೆಲ್ಲ ಪಾವನವಾದವು ಇನ್ನೇನಿನ್ನೇನು ।
ಚಿನ್ಮಯ ಪುರಂದರ ವಿಠಲಯ್ಯ ದೊರಕಿದ ಇನ್ನೇನಿನ್ನೇನು ॥೫॥

0 comments:

Popular Posts