Pages

ಹರಿ ಕುಣಿದ ನಮ್ಮ ಹರಿ ಕುಣಿದ

Friday, 20 February 2009

ಸಾಹಿತ್ಯ-ಪುರಂದರದಾಸ


ಹರಿ ಕುಣಿದ ನಮ್ಮ ಹರಿ ಕುಣಿದ ॥

ಅಕಳಂಕಚರಿತ ಮಕರಕುಂಡಲಧರ ।
ಸಕಲರ ಪಾಲಿಪ ಹರಿ ಕುಣಿದ ॥೧॥

ಅರಳೆಲೆ ಮಾಗಾಯಿ ಕೊರಳ ಮುತ್ತಿನ ಸರ ।
ಸರಳೆಯರೊಡಗೂಡಿ ಹರಿ ಕುಣಿದ ॥೨॥

ಅಂದುಗೆ ಪಾದಗಳಿಂದಲೆ ಬಾಪುರಿ ।
ಚಂದದಿ ನಲಿಯುವ ಹರಿ ಕುಣಿದ ॥೩॥

ಪರಮಭಾಗವತರ ಕೇರಿಯೊಳಾಡುವ ।
ಪುರಂದರವಿಠಲ ಹರಿ ಕುಣಿದ ॥೪॥

0 comments:

Popular Posts