Pages

ಮುಂಜಾನೆದ್ದು ಕುಂಬಾರಣ್ಣ

Monday, 31 August 2015


ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡನ ಹಾರ್ಯಾಡಿ ಮಣ್ಣ ತುಳಿದಾನ ।
ಹಾರಿಹಾರ್ಯಾಡಿ ಮಣ್ಣ ತುಳಿಯುತ ಮಾಡ್ಯಾನ ನಾರ್ಯಾರು ಹೋರುವಂತ ಐರಾಣಿ ॥

ಹೊತ್ತಾರೆದ್ದು ಕುಂಬಾರಣ್ಣ ತುಪ್ಪಬಾನುಂಡನ ಘಟ್ಟೀಸಿ ಮಣ್ಣ ತುಳಿದಾನ ।
ಘಟ್ಟೀಸಿ ಮಣ್ಣ ತುಳಿಯುತ ಮಾಡ್ಯಾನ ಮಿತ್ರೇರು ಹೋರುವಂತ ಐರಾಣಿ ॥೧॥

ಅಕ್ಕಿಹಿಟ್ಟು ನಾನು ತಕ್ಕೊಂಡು ಬಂದೀವ್ನಿ ಗಿಂಡೀಲಿ ತಂದೀವ್ನಿ ತಿಳಿದುಪ್ಪ ।
ಗಿಂಡೀಲಿ ತಂದೀವ್ನಿ ತಿಳಿದುಪ್ಪ ಕುಂಬಾರಣ್ಣ ತಂದಿಡು ನಮ್ಮ ಐರಾಣಿ ॥೨॥

ಕುಂಬಾರಣ್ಣನ ಮಡದಿ ಕಡಗದ ಕೈಯಿಕ್ಕಿ ಕೊಡದ ಮ್ಯಾಲೇನ ಬರೆದಾಳ ।
ಕೊಡದ ಮ್ಯಾಲೇನ ಬರೆದಾಳ್ ಕಲ್ಯಾಣದ ಶರಣಬಸವನ ನಿಲಿಸ್ಯಾಳ ॥೩॥

0 comments:

Popular Posts