Pages

ಬಂತಿದೋ ಶೃಂಗಾರಮಾಸ

Wednesday 16 May 2012

ಸಾಹಿತ್ಯ-ಅಂಬಿಕಾತನಯದತ್ತ


ಬಂತಿದೋ ಶೃಂಗಾರಮಾಸ
ಕಂತು ನಕ್ಕ ಚಂದ್ರಹಾಸ
ಎಂತು ತುಂಬಿತಾಕಾಶ
ಕಂಡವರನು ಹರಸಲು

ಕಿರಿಬೆರಳಲಿ ಬೆಳ್ಳಿಹರಳು
ಕರಿಕುರುಳೊಳು ಚಿಕ್ಕೆ ಅರಳು
ತೆರಳಿದಳಿದೋ ತರಳೆ ಇರುಳು
ತನ್ನರಸನನರಸಲು

ಗಂಗೆ ಯಮುನೆ ಕೂಡಿ ಹರಿದು
ಸಂಗಮ ಜಲ ಬಿಳಿದು ಕರಿದು
ತಿಂಗಳ ನಗೆ ಮೇರೆವರಿದು
ಬೇರೆ ಮಿರುಗು ನೀರಿಗೂ

ಪಂತದಿಂದ ಮನೆಯ ತೊರೆದು
ಪಾಂಥ ನೆನೆದನತ್ತು ಕರೆದು
ಇಂಥ ಸಮಯ ಬೇರೆ ಬರದು
ದಂಪತಿಗಳಿಗಾರಿಗೂ

ನಾನು ನೀನು ಜೊತೆಗೆ ಬಂದು
ಈ ನದಿಗಳ ತಡಿಗೆ ನಿಂದು
ಸಾನುರಾಗದಿಂದ ಇಂದು
ದೀಪ ತೇಲಿ ಬಿಟ್ಟೆವು

ಈ ಕವಿತೆಯ ವಿಶ್ಲೇಷಣೆ ಇಲ್ಲಿದೆ.

ರಾಜೀವ ತಾರಾನಾಥರ ಸಂಗೀತ ಸಂಯೋಜನೆ, B.R.ಛಾಯಾ ಅವರ ದನಿಯಲ್ಲಿ ಈ ಕವಿತೆ :

0 comments:

Popular Posts