Pages

ನಂಬರು ನೆಚ್ಚರು

Sunday, 27 May 2018

ಸಾಹಿತ್ಯ-ಬಸವಣ್ಣ


ನಂಬರು ನೆಚ್ಚರು ಬರಿದೆ ಕರೆವರು ।
ನಂಬಲರಿಯರೀ ಲೋಕದ ಮನುಜರು ॥
ನಂಬಿ ಕರೆದಡೆ ಓ ಎನ್ನನೆ ಶಿವನು? ।
ನಂಬದೆ ನೆಚ್ಚದೆ ಬರಿದೆ ಕರೆವರ ।
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ ॥೧॥



Read more...

ನಾನು ನೀನು ಎನ್ನದಿರು

Sunday, 20 May 2018

ಸಾಹಿತ್ಯ-ಕನಕದಾಸ


ನಾನು ನೀನು ಎನ್ನದಿರು ಹೀನ ಮಾನವ ।
ಜ್ಞಾನದಿಂದ ನಿನ್ನ ನೀನೇ ತಿಳಿದು ನೋಡೆಲೋ, ಪ್ರಾಣಿ ॥

ಹೆಣ್ಣು ಹೊನ್ನು ಮಣ್ಣು ಮೂರು ನಿನ್ನದೇನೆಲೋ ।
ಅನ್ನದಿಂದ ಬಂದ ಕಾಮ ನಿನ್ನದೇನೆಲೋ ।
ಕರ್ಣದಿಂದ ಬರುವ ಘೋಷ ನಿನ್ನದೇನೆಲೋ ।
ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೋ, ಪ್ರಾಣಿ ॥೧॥

ಕಾಲ ಕರ್ಮ ಶೀಲ ನೇಮ ನಿನ್ನದೇನೆಲೋ ।
ಜಾಲವಿದ್ಯೆ ಬಯಲು ಮಾಯೆ ನಿನ್ನದೇನೆಲೋ ।
ಕೀಲು ಜಡಿದ ಮರದ ಗೊಂಬೆ ನಿನ್ನದೇನೆಲೋ ।
ಲೋಲ ಆದಿಕೇಶವನ ಭಕ್ತನಾಗೆಲೋ ಪ್ರಾಣಿ ॥೨॥

Read more...

ಕೇಳನೋ ಹರಿ ತಾಳನೋ

Thursday, 10 May 2018

ಸಾಹಿತ್ಯ-ಪುರಂದರದಾಸ


ಕೇಳನೋ ಹರಿ ತಾಳನೋ ।
ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ ॥

ತಂಬೂರಿ ಮೊದಲಾದ ಅಖಿಲವಾದ್ಯಗಳಿದ್ದು,
ಕೊಂಬು ಕೊಳಲು ಧ್ವನಿ ಸ್ವರಗಳಿದ್ದು
ತುಂಬುರು ನಾರದರ ಗಾನ ಕೇಳುವ ಹರಿ,
ನಂಬಲಾರ ಈ ಡಂಭಕರ ಕೂಗಾಟ ॥೧॥

ನಾನಾಬಗೆಯ ರಾಗ ಭಾವ ತಿಳಿದು,
ಸ್ವರಜ್ಞಾನ ಮನೋಧರ್ಮ ಜಾತಿಯಿದ್ದು
ದಾನವಾರಿಯ ದಿವ್ಯನಾಮರಹಿತವಾದ,
ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು ॥೨॥

ಅಡಿಗಡಿಗಾನಂದಭಾಷ್ಪ ಪುಳಕದಿಂದ,
ನಡೆನುಡಿಗೆ ಶ್ರೀಹರಿ ಎನ್ನುತ
ದೃಢಭಕ್ತರೊಡಗೂಡಿ ಹರಿಕೀರ್ತನೆಯ ಪಾಡಿ,
ಕಡೆಗೆ ಪುರಂದರವಿಠಲ ಎಂದರೆ ಕೇಳ್ವ ॥೩॥

Read more...

Popular Posts