ಬಾರೆ ಭಾಗ್ಯದ ನಿಧಿಯೇ
Tuesday, 19 May 2015
ಸಾಹಿತ್ಯ-ಅನಂತಾದ್ರೀಶ
ಬಾರೆ ಭಾಗ್ಯದ ನಿಧಿಯೇ
ಕರವೀರನಿವಾಸಿನಿ ಸಿರಿಯೇ ।
ಬಾರೆ ಬಾರೆ ಕರವೀರನಿವಾಸಿನಿ
ಬಾರಿಬಾರಿಗೂ ಶುಭತೋರು ನಮ್ಮ ಮನಗೆ ॥
ಲೋಕಮಾತೆಯು ನೀನು
ನಿನ್ನ ತೋಕನಲ್ಲವೆ ನಾನು
ಆಕಳು ಕರುವನು ಸ್ವೀಕರಿಸುವ ಪರಿ
ನೀ ಕರುಣದಿ ಕಾಲ್ಹಾಕು ನಮ್ಮ ಮನಗೆ ॥೧॥
ನಿಗಮವೇದ್ಯಳೇ ನೀನು
ನಿನ್ನ ಪೊಗಳಲಾಪೆನೆ ನಾನು
ಮಗನಪರಾಧವ ತೆಗೆದೆಣೆಸದೆ ನೀ
ಲಗುಬಗೆಯಿಂದಲಿ ಪನ್ನಂಗವೇಣಿ ॥೨॥
ಕಡೆಗೂ ನಮ್ಮನಿವಾಸ
ಒಡೆಯ ಅನಂತಾದ್ರೀಶ
ಒಡೆಯನಿದ್ದಲ್ಲಿಗೆ ಮಡದಿ ಬರುವುದು
ರೂಢಿಗುಚಿತವಿದು ನಡೆ ನಮ್ಮ ಮನೆಗೆ ॥೩॥ Read more...